ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ವಿರುದ್ಧದ ಸಂಘಟಿತ ಅಪರಾಧಗಳ ಕಾಯ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿಗೆ ಜಾಮೀನು ಸಿಗದಂತೆ ಮಾಡಲು ಆತನ ವಿರುದ್ಧ ಕೆಸಿಒಸಿ ಕಾಯ್ದೆ ಅನ್ವಯಿಸಲಾಗಿದೆ ಎಂದು ಶ್ರೀಕಿ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಬಿಟ್ ಕಾಯಿನ್ ಕೇಸ್ ಗೂ ಮುನ್ನ ಎರಡು ಆರೋಪಪಟ್ಟಿಯಿದ್ದು, ಕಾಗ್ನಿಜೆನ್ಸಿ ನಿಯಮ ಪಾಲಿಸಿಲ್ಲ. ಅಲ್ಲದೇ ಸಂಘಟಿತ ಅಪರಾಧ ಕಾಯ್ದೆ ಹೇಗೆ ಅನ್ವಯವಾಗಲಿದೆ ಎಂಬುದನ್ನು ಪೊಲೀಸರು ಉಲ್ಲೇಖಿಸಿಲ್ಲ. ಹೀಗಾಗಿ ಶ್ರೀಕಿ ವಿರುದ್ಧದ ಸಂಘಟಿತ ಅಪರಾಧ ಕಾಯ್ದೆ-ಕೆಸಿಒಸಿ ಅಂಶಗಳು ಅನ್ವಯವಾಗುವುದುಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.