ಬಾಟಲಿ ನೀರು ಪೂರೈಕೆ ದಿಗ್ಗಜ ಬಿಸ್ಲೇರಿ ಇದೀಗ ಮೊಬೈಲ್ ತಂತ್ರಾಂಶ ಬಿಡುಗಡೆ ಮಾಡಿದ್ದು, ಮನೆ ಬಾಗಿಲಿಗೆ ಶುದ್ಧಕುಡಿಯುವ ನೀರಿನ ಡೆಲಿವರಿ ಮಾಡಲು ಮುಂದಾಗಿದೆ.
ನೇರವಾಗಿ ಗ್ರಾಹಕರಿಗೆ (ಡಿ2ಸಿ) ಕಾನ್ಸೆಪ್ಟ್ನಲ್ಲಿ ನೀರಿನ ಡೆಲಿವರಿ ಮಾಡಲು ಮುಂದಾಗಿರುವ ಬಿಸ್ಲೇರಿ, ತನ್ನ ಈ ಆವಿಷ್ಕಾರೀ ಅಪ್ಲಿಕೇಶನ್ ಅನ್ನು ದೇಶದ 26 ನಗರಗಳಲ್ಲಿ ಆರಂಭಿಸಿದೆ. ವ್ಯಾಪಕವಾಗುತ್ತಿರುವ ಇ-ಕಾಮರ್ಸ್ ಕ್ಷೇತ್ರದ ಮೂಲಕ ತನ್ನ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಬಿಸ್ಲೇರಿ ಇಂಟರ್ನ್ಯಾಷನಲ್ ಮುಂದಾಗಿದೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದ ಕಿಡಂಬಿ ಶ್ರೀಕಾಂತ್
ಕೋವಿಡ್-19 ಲಾಕ್ಡೌನ್ ವೇಳೆ ಈ ಐಡಿಯಾ ಮೊಳೆತಿದ್ದು, ತಂತಮ್ಮ ಮನೆಗಳಲ್ಲಿ ಲಾಕ್ಡೌನ್ ಆಗಿದ್ದ ಮಂದಿಗೆ ಮನೆ ಬಾಗಿಲಿಗೆ ಮಿನರಲ್ ನೀರನ್ನು ಪೂರೈಕೆ ಮಾಡಲು ಶುರುಮಾಡಿದೆ.
ತನ್ನೆಲ್ಲಾ ಉತ್ಪನ್ನಗಳನ್ನು ಒಂದೆಡೆ ಸಿಗುವಂತೆ ಮಾಡಲು ಬಿಸ್ಲೇರಿ ಸಾಮಾನ್ಯ ಪ್ಲಾಟ್ಫಾರಂ ಒಂದಕ್ಕೆ ಚಾಲನೆ ನೀಡಿದೆ. ನಿರಂತರವಾಗಿ ಶುದ್ಧ ನೀರಿನ ಪೂರೈಕೆ ಮಾಡಲು ಚಂದಾದಾರಿಕೆಗಳನ್ನೂ ಸಹ ಬಿಸ್ಲೇರಿ ಆರಂಭಿಸಿದೆ.
ಆಂಡ್ರಾಯ್ಡ್ ಮತ್ತು ಐಓಎಸ್ಗಳಲ್ಲಿ ಬಿಸ್ಲೇರಿಯ ಅಪ್ಲಿಕೇಶನ್ ಲಭ್ಯವಿದ್ದು, 24 ಗಂಟೆಯೂ ಗ್ರಾಹಕರ ಮನೆ ಬಾಗಿಲುಗಳಿಗೆ ನೀರಿನ ಡೆಲಿವರಿ ಮಾಡಲಾಗುವುದು.