ಕೊಪ್ಪಳ: ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳವಾಗಿದೆ. ಇದನ್ನು ಮತ್ತೆ ಮತ್ತೆ ಘೋಷಣೆ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆನೆಗೊಂದಿಯಲ್ಲಿ ಮಾತನಾಡಿದ ಸಿಎಂ, ಐತಿಹಾಸಿಕವಾಗಿ ಸಾವಿರಾರು ವರ್ಷಗಳ ಕಿಷ್ಕಿಂಧೆಯ ಪುರಾವೆಗಿಂತ ಮತ್ತೊಂದು ಪುರಾವೆ ಅಗತ್ಯವಿಲ್ಲ. ಇತ್ತೀಚೆಗೆ ಹನುಮ ಜನಿಸಿದ್ದು ಅಲ್ಲಿ, ಇಲ್ಲಿ ಎಂಬ ವಿವಾದಿತ ಹೇಳಿಕೆ ಕೇಳಿ ಬರುತ್ತಿವೆ. ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ ಎಂದು ಹೇಳಿದರು.
ಅಂಜನಾದ್ರಿ ಬೆಟ್ಟವನ್ನು ರಾಷ್ಟ್ರೀಯ ಮಟ್ಟದ ಯಾತ್ರಾ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಬಜೆಟ್ ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ರೋಪ್ ವೇ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.