alex Certify ಜನನ, ಮರಣ ಪ್ರಮಾಣ ಪತ್ರ ಸೇರಿ ಸೇವೆ, ಸೌಲಭ್ಯ ಪಡೆಯಲು ಪಡಿತರ ಚೀಟಿ ಸಂಖ್ಯೆ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನನ, ಮರಣ ಪ್ರಮಾಣ ಪತ್ರ ಸೇರಿ ಸೇವೆ, ಸೌಲಭ್ಯ ಪಡೆಯಲು ಪಡಿತರ ಚೀಟಿ ಸಂಖ್ಯೆ ಕಡ್ಡಾಯ

ಮೈಸೂರು: ಜನನ, ಮರಣ ಪ್ರಮಾಣ ಪತ್ರ ಪಡೆಯಲು ನಾಗರೀಕರಿಂದ ಕುಟುಂಬ ಗುರುತಿನ ಸಂಖ್ಯೆ(ಪಡಿತರ ಚೀಟಿ ಸಂಖ್ಯೆ)ಯು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆದೇಶಿಸಿದ್ದಾರೆ.

ಜಿಲ್ಲಾದ್ಯಂತ ಜನನ ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸಲಾಗುತ್ತಿದ್ದು, ಇನ್ನೂ ಮುಂದೆ 2021 ಮಾಚ್20 ರಿಂದ ಅನ್ವಯವಾಗುವಂತೆ ನೋಂದಾಯಿಸುವ ಎಲ್ಲಾ ಘಟನೆಗಳಿಗೆ ಸರ್ಕಾರದ ಆದೇಶಾನುಸಾರ ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ದಾಖಲಿಸಿ ಜನನ ಮರಣ ಪ್ರಮಾಣ ಪತ್ರವನ್ನು ವಿತರಿಸಲು ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಸರ್ಕಾರದ ಸೇವೆ/ಸೌಲಭ್ಯ ಪಡೆಯಲು ಅರ್ಜಿಸಲ್ಲಿಸುವ ರಾಜ್ಯ ನಿವಾಸಿ ನಾಗರೀಕರಿಂದ ಕುಟುಂಬ ಗುರುತಿನ ಸಂಖ್ಯೆ (ಪಡಿತರ ಚೀಟಿ ಸಂಖ್ಯೆ)ಯು ಕಡ್ಡಾಯವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ. ಸಂ: 0821-2439349, ಮೊ. ಸಂ: 9964973465ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...