ನವದೆಹಲಿ: ಪೌರತ್ವ, ಜನ್ಮದಿನಾಂಕ, ಉದ್ಯೋಗ ದಾಖಲೆ ಸೇರಿದಂತೆ ಎಲ್ಲ ದಾಖಲೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು, ಶೀಘ್ರವೇ ಜಾರಿಗೆ ಬರಲಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ 60 ಅಂಶಗಳ ಕ್ರಿಯಾಯೋಜನೆ ರೂಪಿಸುವ ಕುರಿತು ಚರ್ಚೆ ನಡೆಸಲಾಗಿದೆ. ಆಡಳಿತ ಮಾಹಿತಿ, ತಂತ್ರಜ್ಞಾನದ ಉನ್ನತಿಕರಣ, ವ್ಯಾಪಾರೋದ್ಯಮ, ಪರಿಸರ ಸುಧಾರಣೆ, ನಾಗರಿಕ ಸೇವೆಗಳ ಉನ್ನತೀಕರಣ ಉದ್ದೇಶದಿಂದ ಯೋಜನೆ ರೂಪಿಸಲಾಗುತ್ತಿದೆ.
ಜನ್ಮದಿನಾಂಕ, ಉದ್ಯೋಗ ದಾಖಲೆ, ವಾಣಿಜ್ಯ ಒಪ್ಪಂದ ಸೇರಿ ಜೀವನದ ಪ್ರತಿಯೊಂದು ದಾಖಲೆಗಳನ್ನು ಒಂದೇ ಕಡೆ ಸಿಗುವಂತೆ ಮಾಡುವ ಸಮಗ್ರ ಕಾರ್ಯಯೋಜನೆಯನ್ನು ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಲಾಗಿದೆ.