
ನವದೆಹಲಿ: ದೇಶದ ಏಕೈಕ ಸಂಚಾರಿ ಪಕ್ಷಿ ಆಸ್ಪತ್ರೆ ಈಗ ಎಲೆಕ್ಟ್ರಿಕ್ ಬೈಕ್ ನಲ್ಲಿ ಲಭ್ಯವಾಗಲಿದೆ. ಪಕ್ಷಿ ಚಿಕಿತ್ಸಕ ಪ್ರಿನ್ಸ್ ಮೆಹ್ರಾ ಅವರಿಗೆ ಬ್ಯಾಂಕ್ ನಿಂದ ಎಲೆಕ್ಟ್ರಿಕ್ ಬೈಕ್ ನೀಡಲಾಗಿದ್ದು, ಈ ಆಂಬುಲೆನ್ಸ್ ಮೂಲಕ ಅವರು ಚಿಕಿತ್ಸೆ ನೀಡಲು ತೆರಳಲಿದ್ದಾರೆ.
ಚಂಡೀಗಢ ನಿವಾಸಿ ಪ್ರಿನ್ಸ್ ಮೆಹ್ರಾ, ಎಲ್ಲಿಯೇ ಪಕ್ಷಿಗಳಿಗೆ ಸಮಸ್ಯೆಯಾದರೂ ಅಲ್ಲಿಗೆ ತೆರಳಿ ಚಿಕಿತ್ಸೆ ನೀಡುತ್ತಾರೆ. ಪಕ್ಷಿಗಳಿಗೆ ಸಮಸ್ಯೆಯಾದರೆ ಪರಿಹಾರವನ್ನು ನೀಡುತ್ತಾರೆ. ಜಿನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮತ್ತು ಲಿಮ್ಕಾ ಬುಕ್ ನಲ್ಲಿಯೂ ಹೆಸರು ಗಳಿಸಿದ್ದಾರೆ. ಕಳೆದ 12 ವರ್ಷಗಳಿಂದ ಸಂಕಷ್ಟದಲ್ಲಿರುವ ಪಕ್ಷಗಳನ್ನು ರಕ್ಷಿಸುತ್ತಾ ಬಂದಿದ್ದಾರೆ. ಸಾವಿರಕ್ಕೂ ಹೆಚ್ಚು ಪಕ್ಷಿಗಳಿಗೆ ತಮ್ಮ ಸ್ವಂತ ಖರ್ಚಲ್ಲೇ ಚಿಕಿತ್ಸೆ ನೀಡಿದ್ದಾರೆ. ಪಕ್ಷಿಸತ್ತಾಗ ಅಂತ್ಯಕ್ರಿಯೆಯನ್ನೂ ಮಾಡಿದ್ದಾರೆ. ತಮ್ಮ ಸೈಕಲ್ ನ್ನೇ ಆಂಬುಲೆನ್ಸ್ ಆಗಿ ಮಾಡಿಕೊಂಡು ಪಕ್ಷಿಗಳಿಗೆ ಚಿಕಿತ್ಸೆ ನೀಡಲು ತೆರಳುತ್ತಿದ್ದರು.
ಇದೀಗ ಪ್ರಿನ್ಸ್ ಮೆಹ್ರಾ ಅವರ ಕಾರ್ಯಕ್ಕೆ ಬ್ಯಾಂಕ್ ವೊಂದು ಎಲೆಕ್ಟ್ರಿಕ್ ಸ್ಕೂಟರ್ ನೀಡಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಿನ್ಸ್ ಮೆಹ್ರಾ, ಬ್ಯಾಂಕ್ ನಿಂದ ಎಲೆಕ್ಟ್ರಿಕ್ ಸ್ಕೂಟರ್ ನೀಡಿರುವುದು ಸಂತಸವಾಗಿದೆ. ಇನ್ಮುಂದೆ ಸ್ಕೂಟರ್ ನಲ್ಲಿ ತೆರಳಿ ಪಕ್ಷಿಗಳಿಗೆ ಚಿಕಿತ್ಸೆ ಕೊಡುವುದಾಗಿ ತಿಳಿಸಿದ್ದಾರೆ.
ಪಕ್ಷಿಗಳು ಸತ್ತಾಗ ಅವುಗಳ ಅಂತ್ಯಕ್ರಿಯೆಯನ್ನೂ ಮಾಡುತ್ತೇನೆ. ಕಾರಣ ಈರೀತಿ ಅಂತ್ಯಕ್ರಿಯೆ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ. ಪಕ್ಷಿಗಳ ಮೃತದೇಹ ಬಯಲಲ್ಲಿ ಕೊಳೆತರೆ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಪ್ರಿನ್ಸ್ ಮೆಹ್ರಾ ತಿಳಿಸಿದ್ದಾರೆ.
ಪಕ್ಷಿಗಳು ಗಾಯಗೊಂಡಿರುವುದನ್ನು ಕಂಡು ಅನೇಕರು ನನಗೆ ಕರೆ ಮಾಡುತ್ತಾರೆ. ಕೆಲವರು ನಾನು ಚಿಕಿತ್ಸೆ ಕೊಡುವುದನ್ನು ನೋಡಿ ಹಣವನ್ನೂ ನೀಡಲು ಮುಂದಾಗುತ್ತಾರೆ. ಆದರೆ ನಾನು ಅವರು ಕೊಡುವ ಹಣ ತೆಗೆದುಕೊಳ್ಳುವುದಿಲ್ಲ. ನನ್ನ ಖರ್ಚಿನಲ್ಲಿಯೇ ನಾನು ಪಕ್ಷಿಗಳಿಗೆ ಚಿಕಿತ್ಸೆ ಕೊಡುತ್ತೇನೆ. ಈ ಹಿಂದೆ ಬ್ಯಾಂಕ್ ಒಂದು ನಾಲ್ಕು ಚಕ್ರದ ವಾಹನವನ್ನು ನೀಡಿತ್ತು. ನಾನು ಅದನ್ನು ನಿರಾಕರಿಸಿದ್ದೆ ಎಂದು ತಿಳಿಸಿದ್ದಾರೆ.