ದೇಶದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ದಾಖಲಾಗುವ ಮೂಲಕ ಸಾಂಕ್ರಾಮಿಕದ ಹೊಡೆತಕ್ಕೆ ತತ್ತರಿಸಿದ್ದ ಮಹಾರಾಷ್ಟ್ರದಲ್ಲಿ ಈಗ ಹಕ್ಕಿ ಜ್ವರದ (ಎಚ್5ಎನ್1) ಭೀತಿ ಎದುರಾಗಿದೆ.
ಅದರಲ್ಲೂ ಮುಖ್ಯವಾಗಿ ಪಾಲ್‌ಘರ್ ಜಿಲ್ಲೆಯಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿ ಹಬ್ಬಿದೆ. ಕೋಳಿ ಫಾರಂ ಸೇರಿದಂತೆ ಅನೇಕ ಕಡೆಗಳಲ್ಲಿ ವಿವಿಧ ಜಾತಿಯ ಹಕ್ಕಿಗಳು ಸೋಂಕಿನಿಂದ ಮೃತಪಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೆಲವು ಜನರಿಗೆ ಕೂಡ ಭೇದಿ, ಜ್ವರ, ಚಳಿ ಕಾಣಿಸಿಕೊಂಡಿದ್ದು ಹಕ್ಕಿಜ್ವರವು ಹಬ್ಬುತ್ತಿರುವ ಭೀತಿ ಎದುರಾಗಿದೆ ಎಂದು ಪಶುವೈದ್ಯ ಡಾ. ಪ್ರಶಾಂತ್ ಕಾಂಬ್ಳೆ ಹೇಳಿದ್ದಾರೆ.
ಹಕ್ಕಿಗಳ ಸಾಕಣೆ ಮಾಡುವವರು, ಕೋಳಿ ಫಾರಂಗಳಲ್ಲಿ ‘ಎಚ್5ಎನ್1’ ವೈರಾಣುವು ನೇರವಾಗಿ ಮನುಷ್ಯರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಕೋಳಿಗಳು ಸತ್ತಕೂಡಲೇ ಮಣ್ಣಿನಲ್ಲಿ ಸೂಕ್ತ ರೀತಿಯಲ್ಲಿ ಹೂಳಬೇಕು. ಕೆಲಸಗಾರರು ಕೈಗಳ ಸ್ವಚ್ಛತೆ ಕಡೆಗೆ ಹೆಚ್ಚೆಚ್ಚು ಗಮನ ಕೊಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ಫೇಸ್ಬುಕ್ ನಲ್ಲಿ ಕಮೆಂಟ್ ಹಾಕಿದ್ದಕ್ಕೆ ಜಗಳ, ಮಾರಣಾಂತಿಕ ಹಲ್ಲೆ ನಡೆಸಿ ಯುವಕನಿಗೆ ಚೂರಿ ಇರಿತ
ಹಕ್ಕಿ ಜ್ವರ ಉಂಟುಮಾಡುವ ‘ಎವಿಯನ್ ಇನ್‌ಫ್ಲುಯೆಂಜಾ ‘ ವೈರಾಣುವು ಸೋಂಕು ಶುರು ಮಾಡಿದ 2 ರಿಂದ 5 ದಿನಗಳವರೆಗೆ ರೋಗಲಕ್ಷಣವನ್ನು ಪ್ರದರ್ಶಿಸಲ್ಲ. ಆದರೆ ಬಳಿಕ 17 ದಿನಗಳವರೆಗೆ ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ, ವಾಂತಿ, ಮಾನಸಿಕ ಕಾಯಿಲೆಗಳು ಹಾಗೂ ಭೇದಿಯಂತಹ ಲಕ್ಷಣಗಳಿಂದ ಸೋಂಕಿತರನ್ನು ಬಾಧಿಸುತ್ತದೆ. ರೋಗಿಗಳಿಗೆ ಮತ್ತು ವೃದ್ಧರಲ್ಲಿ ಈ ಸೋಂಕು ಮಾರಣಾಂತಿಕ ಕೂಡ ಎನಿಸಬಲ್ಲದು ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.
ಮೊಟ್ಟೆಗಳನ್ನು ಬೇಯಿಸದೆಯೇ ತಿನ್ನಲೇ ಬೇಡಿರಿ. ಚಿಕನ್ ತಿನ್ನುವುದು ಎರಡು ವಾರಗಳ ಕಾಲ ಮುಂದೂಡಿ ಎನ್ನುವುದು ವೈದ್ಯರ ಕಟ್ಟುನಿಟ್ಟಿನ ಸೂಚನೆಯಾಗಿದೆ.