ನವದೆಹಲಿ: ಹಕ್ಕಿಜ್ವರ ಹಿನ್ನೆಲೆಯಲ್ಲಿ ದೆಹಲಿಯ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೇ, ರೆಸ್ಟೋರೆಂಟ್ ಗಳಲ್ಲಿ ಮೊಟ್ಟೆ ಮತ್ತು ಕೋಳಿ ಖಾದ್ಯಗಳನ್ನು ಬ್ಯಾನ್ ಮಾಡಲಾಗಿದೆ.
ದೆಹಲಿ ನಾರ್ತ್ ಮತ್ತು ಸೌತ್ ಮುನ್ಸಿಪಲ್ ಕಾರ್ಪೋರೇಷನ್ ನಿಂದ ಜನವರಿ 13 ರಂದು ಕೋಳಿ ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಎರಡೂ ಪ್ರದೇಶಗಳ ರೆಸ್ಟೋರೆಂಟ್ ಗಳಲ್ಲಿ ಕೋಳಿ ಅಥವಾ ಮೊಟ್ಟೆ ಆಧಾರಿತ ಭಕ್ಷ್ಯಗಳನ್ನು ಬ್ಯಾನ್ ಮಾಡಲಾಗಿದೆ. ಆದೇಶ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಆದರೆ, ದೆಹಲಿ ಸರ್ಕಾರದ ಆರೋಗ್ಯ ಇಲಾಖೆ, ಚೆನ್ನಾಗಿ ಬೇಯಿಸಿದ ಮೊಟ್ಟೆ ಮತ್ತು ಕೋಳಿಯನ್ನು ಸೇವಿಸಬಹುದು ಎಂದು ಹೇಳಿದೆ. ಅರ್ಧ ಬೇಯಿಸಿದ ಮತ್ತು ಕರಿದ ಮೊಟ್ಟೆ ಮತ್ತು ಚಿಕನ್ ಸೇವಿಸದಂತೆ ತಿಳಿಸಲಾಗಿದೆ.