ಬೆಂಗಳೂರು : ಹಕ್ಕಿ ಜ್ವರ ಭೀತಿ ಹಿನ್ನೆಲೆ ಜನರು ಚಿಕನ್ ನಿಂದ ದೂರ ಸರಿದಿದ್ದಾರೆ. ಅಲ್ಲದೇ ಮಟನ್ ಬೆಲೆ ಕೆಜಿಗೆ 700-800 ಇದ್ದು, ಮಟನ್ ಕೊಳ್ಳಲು ಸಾಧ್ಯವಾಗದೇ ಮೀನಿಗೆ ಮೊರೆ ಹೋಗಿದ್ದಾರೆ. ಇದರ ಪರಿಣಾಮ ಮೀನಿನ ಬೆಲೆ ಶೇ.30 ರಷ್ಟು ಏರಿಕೆಯಾಗಿದೆ.
ಬೇಸಿಗೆಯಾಗಿದ್ದರಿಂದ ಮಾರುಕಟ್ಟೆಗೆ ಹೆಚ್ಚಿನ ಮೀನು ಪೂರೈಕೆಯಾಗದ ಹಿನ್ನೆಲೆ ಮೀನಿನ ದರ ಏರಿಕೆಯಾಗಿದೆ. ಅಂಜಲ್ ಮೀನು 650-800, ಬಂಗುಡೆ 200-250, ವೈಟ್ ಪಾಂಪ್ಲೇಟ್ 900-1200, ಬ್ಲಾಕ್ ಪಾಂಪ್ಲೇಟ್ 600-850 , ಪಾರೆ ಮೀನು 200-250 ರೂಗೆ ಮಾರಾಟವಾಗುತ್ತಿದೆ.
ಚಿಕನ್ ಗಿಂತ ಮೀನು ಆರೋಗ್ಯಕ್ಕೆ ಒಳ್ಳೆಯದು
ಚಿಕನ್ ತಿನ್ನುವುದು ಅದರ ಹೆಚ್ಚಿನ ಕ್ಯಾಲೊರಿ ಸೇವನೆಯಿಂದಾಗಿ ತೂಕ ಹೆಚ್ಚಾಗಲು ಕಾರಣವಾಗಬಹುದು. ಅದಕ್ಕಾಗಿಯೇ ಹೆಚ್ಚು ಮಟನ್ ಮತ್ತು ಚಿಕನ್ ತಿನ್ನುವುದು ಕೊಬ್ಬು ಸಂಗ್ರಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ರಕ್ತನಾಳಗಳು ಬ್ಲಾಕ್ ಆಗಬಹುದು.
ಆದರೆ ಮೀನಿನ ಅಪಾಯ ಅದಲ್ಲ. ಇವು ಬಿಳಿ ಮಾಂಸದ ವ್ಯಾಪ್ತಿಯಲ್ಲಿ ಬರುತ್ತವೆ. ಇದರಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಕೊಬ್ಬು ಇಲ್ಲ. ಇದಲ್ಲದೆ, ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಅವು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.