ಮೇಜರ್ ಲೀಗ್ ಬೇಸ್ ಬಾಲ್ (MLB) ಇತಿಹಾಸದಲ್ಲಿ ಎರಡನೇ ಬಾರಿಗೆ ಕ್ರೀಡಾಂಗಣದಲ್ಲಿ ಅನಾಹುತ ನಡೆದಿದೆ.
ಅರಿಝೋನಾ ಡೈಮಂಡ್‌ಬ್ಯಾಕ್ಸ್ ಪಿಚರ್ ಜಾಕ್ ಗ್ಯಾಲನ್ ಬಾಲ್ ಎಸೆಯುವಾಗ ಆಕಸ್ಮಿಕವಾಗಿ ಹಕ್ಕಿಗೆ ತಗುಲಿದ ಪರಿಣಾಮ ಪಕ್ಷಿಯ ಪ್ರಾಣ ಕ್ರೀಡಾಂಗಣದಲ್ಲೇ ಹಾರಿಹೋಗಿದೆ.
ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ಓಕ್ಲ್ಯಾಂಡ್ ಅಥ್ಲೆಟಿಕ್ಸ್ ವಿರುದ್ಧ ಅರಿಝೋನಾ ಆಟಕ್ಕೆ ಮುಂಚಿತವಾಗಿ ಡಿ-ಬ್ಯಾಕ್ಸ್ ಪಿಚರ್ ಜಾಕ್ ಗ್ಯಾಲನ್ ಔಟ್ ಫೀಲ್ಡ್ ನಲ್ಲಿ ಸೈಡ್ ಸೆಷನ್ ಅನ್ನು ಎಸೆಯುತ್ತಿದ್ದರು. ಈ ವೇಳೆ ಅಜಾಕರೂಕತೆಯಿಂದ ಬೇಸ್ ಬಾಲ್ ಹಾದು ಹೋಗುತ್ತಿದ್ದ ಹಕ್ಕಿಗೆ ಬಡಿದಿದೆ. ದುರದೃಷ್ಟವಶಾತ್ ಪಕ್ಷಿಯು ಕ್ರೀಡಾಂಗಣದಲ್ಲೇ ಪ್ರಾಣಬಿಟ್ಟಿತು.
ಗ್ಯಾಲೆನ್ ಕರ್ವ್‌ಬಾಲ್‌ನಿಂದ ಹಕ್ಕಿಗೆ ಪೆಟ್ಟು ಬಿದ್ದಿದೆ. ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಸಾರದ ವೇಳೆ ಬಿತ್ತರವಾಗಿದೆ.
2001 ರಲ್ಲಿ ಡೈಮಂಡ್‌ಬ್ಯಾಕ್ಸ್ ಪಿಚರ್ ರಾಂಡಿ ಜಾನ್ಸನ್ ಕೂಡ ಇದೇ ರೀತಿಯ ಘಟನೆಯಲ್ಲಿ ಹಕ್ಕಿಯ ಪ್ರಾಣ ತೆಗೆದಿದ್ರು.