ವಾರಣಾಸಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇದಾದ ಬಳಿಕ ವಾರಣಾಸಿಯ ಪೊಲೀಸ್ ಲೈನ್ ನಲ್ಲಿ ಸಿಎಂ ಯೋಗಿ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಹೆಲಿಕಾಪ್ಟರ್ ಪೊಲೀಸ್ ಲೈನ್ ನಿಂದ ಸುಲ್ತಾನ್ ಪುರಕ್ಕೆ ಟೇಕ್ ಆಫ್ ಆಗಿತ್ತು, ಆದರೆ ಪಕ್ಷಿ ಡಿಕ್ಕಿ ಹೊಡೆದ ನಂತರ, ಪೊಲೀಸ್ ಲೈನ್ ನಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಹೆಲಿಕಾಪ್ಟರ್ ನ ತಾಂತ್ರಿಕ ಪರೀಕ್ಷೆ ನಡೆಸಲಾಗಿದೆ. ವಿಶೇಷ ವಿಮಾನ ಲಕ್ನೋದಿಂದ ವಾರಣಾಸಿಗೆ ತಲುಪಿದ ನಂತರ ಸಿಎಂ ಯೋಗಿ ಪ್ರಯಾಣ ಮುಂದುವರೆಸಿದ್ದಾರೆ. ಸಿಎಂ ಯೋಗಿ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.