ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ಅವ್ರನ್ನ ಭೇಟಿಯಾದ ಕ್ಷಣದಿಂದಲು, ಕರ್ನಲ್ ಕೇಸರಿಪಕ್ಷಕ್ಕೆ ಸೇರಬಹುದು ಎಂದು ಹೇಳಲಾಗುತ್ತಿತ್ತು.
ರಾಜ್ಯದ ಬಗ್ಗೆ ಉತ್ತರಾಖಂಡ ಸಿಎಂ ಧಮಿ ಅವರಿಗಿರುವ ದೂರದೃಷ್ಟಿ ನನಗೆ ಇಷ್ಟವಾಗಿದೆ. ನನ್ನ ಸಹೋದರ ಬಿಪಿನ್ ರಾವತ್ ಅವರಿಗಿ ಇದೇ ಕನಸುಗಳಿದ್ದವು. ಇವರ ಮನಸ್ಥಿತಿ ನನ್ನ ಸಹೋದರನ ಮನಸ್ಥಿತಿ ಹೊಂದಿಕೆಯಾಗುತ್ತದೆ. ಬಿಜೆಪಿಗೂ ಅದೇ ಮನಸ್ಥಿತಿ ಇದೆ ಎಂದು, ಉತ್ತರಾಖಂಡ ಸಿಎಂ ಅವರನ್ನು ಭೇಟಿಯಾದಾಗ, ವಿಜಯ್ ರಾವತ್ ಹೇಳಿದ್ದಾರೆ. ನೀವು ಬಿಜೆಪಿಗೆ ಸೇರುತ್ತೀರಾ ಎಂದು ರಾವತ್ ಅವರನ್ನು ಕೇಳಿದಾಗ, ಅವರು ನನ್ನನ್ನು ಕೇಳಿದರೆ, ನಾನು ಉತ್ತರಾಖಂಡದ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದ್ದರು.
ವೀಕೆಂಡ್ ಕರ್ಫ್ಯೂ ಬೇಕಿಲ್ಲ: ಸಚಿವರೇ ಮಾಸ್ಕ್ ಹಾಕಲ್ಲ ಅಂದ್ರೆ ಜನ ಏಕೆ ಹಾಕಬೇಕು? ಸಿದ್ಧರಾಮಯ್ಯ ಪ್ರಶ್ನೆ
ಕೆಲವೇ ದಿನಗಳಲ್ಲಿ ಡೆಹ್ರಾಡೂನ್ನಲ್ಲಿ ನಾನು ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ ಎಂದು ರಾವತ್ ಇಂದು ಬೆಳಗ್ಗೆಯೆ ಹೇಳಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿತ್ತು. ಅಲ್ಲದೆ ಬಿಜೆಪಿ ಅವಕಾಶ ನೀಡಿದರೆ 2022ರ ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ. ನಾನು ಬಿಜೆಪಿಗಾಗಿ ಕೆಲಸ ಮಾಡಲು ಬಯಸುತ್ತೇನೆ, ನಮ್ಮ ಕುಟುಂಬದ ಸಿದ್ಧಾಂತವು ಬಿಜೆಪಿಯಂತೆಯೇ ಇದೆ, ಬಿಜೆಪಿ ನಾಯಕರು ಹೇಳಿದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ರಾವತ್ ಹೇಳಿದ್ದರು ಎಂದು ವರದಿಯಾಗಿದೆ.