ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೀವ್ಸ್. ರಜೆಯ ಮಜಾ ಅನುಭವಿಸಲು ಬಹುತೇಕ ಬಿ –ಟೌನ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ಹೋಗ್ತಾರೆ. ಕೊರೊನಾ ನಂತ್ರ ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ ಗೆ ತೆರಳುತ್ತಿದ್ದಾರೆ. ಶಾಹಿದ್ ಕಪೂರ್-ಮೀರಾ ರಜಪೂತ್, ಆಲಿಯಾ ಭಟ್-ರಣಬೀರ್ ಕಪೂರ್, ಟೈಗರ್ ಶ್ರಾಫ್ -ದಿಶಾ ಪಟಾನಿ ನಂತ್ರ ಈಗ ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ.
ಗಂಡನ ಚಿತಾಭಸ್ಮ ತಿಂತಾಳೆ ಈ ಮಹಿಳೆ……!
ನವರಾತ್ರಿ ದುರ್ಗಾ ಪೂಜೆ ನಂತ್ರ ಕುಟುಂಬದ ಜೊತೆ ಬಿಪಾಷಾ, ಮಾಲ್ಡೀವ್ಸ್ ನಲ್ಲಿ ರಜೆ ಎಂಜಾಯ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಿಪಾಷಾ, ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಾದಕ ಕಪ್ಪು ಬಿಕಿನಿಯಲ್ಲಿ, ಬಿಪಾಷಾ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಬಿಪಾಷಾ ಫೋಸ್ ಅಭಿಮಾನಿಗಳ ಮನಸ್ಸು ಗೆದ್ದಿದೆ. ಇದಲ್ಲದೆ, ಮಾಲ್ಡೀವ್ಸ್ ಬೀಚ್ ನಲ್ಲಿ ಮೋಜು ಮಾಡ್ತಿರುವ ಸಣ್ಣ ವೀಡಿಯೊ ಕ್ಲಿಪ್ ಕೂಡ ಹಂಚಿಕೊಂಡಿದ್ದಾರೆ. ಬಿಪಾಶಾ ಫೋಟೋಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದೆ. ಅನೇಕರು ಬಿಪಾಷಾ ಸ್ಟೈಲ್ ಮೆಚ್ಚಿಕೊಂಡ್ರೆ ಮತ್ತೆ ಕೆಲವರು ಕಾಲೆಳೆದಿದ್ದಾರೆ.
https://www.instagram.com/p/CVPSmKYhaG2/