![](https://kannadadunia.com/wp-content/uploads/2023/08/bipasha-devi.jpg)
ಮುಂಬೈ: ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಕಳೆದ ವರ್ಷ ನವೆಂಬರ್ ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆಗಾಗ ಪತಿ ಹಾಗೂ ಮಗಳೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಮಗಳಿಗೆ ಆರೋಗ್ಯ ಸಮಸ್ಯೆಯಿರುವುದಾಗಿ ಹೇಳಿರುವ ಬಿಪಾಶಾ, ಲೈವ್ ನಲ್ಲಿಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.
ಮಗಳಿಗೆ ದೇವಿ ಎಂದು ಹೆಸರಿಟ್ಟಿರುವ ಬಿಪಾಶಾ, ತನ್ನ ಮಗಳು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆಕೆಯ ಹೃದಯದಲ್ಲಿ ಎರಡು ರಂಧ್ರಗಳಿವೆ. ಮಗು ಜನಿಸಿದ ಮೂರೇ ದಿನಕ್ಕೆ ಈ ಆಘಾತಕಾರಿ ವಿಷಯವನ್ನು ವೈದ್ಯರು ತಿಳಿಸಿದ್ದರು ಎಂದು ನೇಹಾ ಧೂಪಿಯಾ ಅವರೊಂದಿಗಿನ ಲೈವ್ ಸೆಷನ್ ನಲ್ಲಿ ಕಣ್ಣೀರಾಗಿದ್ದಾರೆ.
ಮಗು ಬೆಳೆಯುತ್ತಾ ಸರಿ ಹೋಗಬಹುದು ಎಂದುಕೊಂಡಿದ್ದೆವು. ಆದರೆ ಹಾಗಾಗಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ಕಷ್ಟ. ಆದರೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು. ಮಗಳು ಆಪರೇಷನ್ ಥಿಯೇಟರ್ ನಲ್ಲಿ 6 ಗಂಟೆ ಇದ್ದಾಗ ನನ್ನ ಪ್ರಾಣವೇ ನಿಂತು ಹೋದಂತೆ ಭಾಸವಾಗಿತ್ತು ಎಂದು ಭಾವುಕರಾಗಿದ್ದಾರೆ.
ಮಗಳು ದೇವಿ ಈಗ ಆರಾಮವಾಗಿದ್ದಾಳೆ. ಆಕೆಯ ಆರೋಗ್ಯದ ಬಗ್ಗೆ ನಿಗಾವಹಿಸಲು ಪ್ರತಿ ತಿಂಗಳು ಹೃದಯದ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಮಗುವಿಗೆ ಸ್ಕ್ಯಾನಿಂಗ್ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.