alex Certify ಸೀರೆಯುಟ್ಟು, ಮೇಕಪ್ ಮಾಡಿಕೊಂಡು ಐಎಎಸ್ ಅಕಾಡೆಮಿ ಸಿಬ್ಬಂದಿ ಆತ್ಮಹತ್ಯೆ; ವ್ಯಕ್ತಿಯ ಸಾವಿನ ಕಾರಣವೇನು…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟು, ಮೇಕಪ್ ಮಾಡಿಕೊಂಡು ಐಎಎಸ್ ಅಕಾಡೆಮಿ ಸಿಬ್ಬಂದಿ ಆತ್ಮಹತ್ಯೆ; ವ್ಯಕ್ತಿಯ ಸಾವಿನ ಕಾರಣವೇನು…..?

ಉತ್ತರಾಖಂಡದ ಮಸ್ಸೂರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ (LBSNAA) ನಲ್ಲಿ 22 ವರ್ಷದ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ವರದಿಯಾಗಿದೆ. ಮೃತರನ್ನು ಉತ್ತರಾಖಂಡದ ಪೌರಿ ಗಡ್ವಾಲ್ ನಿವಾಸಿ ಅನುಕುಲ್ ರಾವತ್ ಎಂದು ಗುರುತಿಸಲಾಗಿದೆ. ಅವರ ಶವ ಸರ್ಕಾರಿ ವಸತಿ ನಿಲಯದಲ್ಲಿ ಪತ್ತೆಯಾಗಿದ್ದು ಈ ವೇಳೆ ಸೀರೆ ಉಟ್ಟು ಮೇಕಪ್ ಧರಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಅನುಕುಲ್ ರಾವತ್ ಕೆಲಸಕ್ಕೆ ಗೈರುಹಾಜರಾಗಿದ್ದರಿಂದ ಎಚ್ಚೆತ್ತ ಸಹೋದ್ಯೋಗಿಗಳು ಅವರನ್ನು ಪತ್ತೆಮಾಡಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಪ್ರತಿಷ್ಠಿತ ಐಎಎಸ್ ತರಬೇತಿ ಅಕಾಡೆಮಿಯಲ್ಲಿ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡಲು ಆರಂಭಿಸಿದ ರಾವತ್, ಕೆಲಸಕ್ಕೆ ಹಾಜರಾಗಿರಲಿಲ್ಲ. ಅವನ ಅನುಪಸ್ಥಿತಿಯಿಂದ ಕಳವಳಗೊಂಡ ಸಹೋದ್ಯೋಗಿಗಳು ಅವರಿದ್ದ ಕೋಣೆಯ ಬಾಗಿಲನ್ನು ಪದೇ ಪದೇ ತಟ್ಟಿದಾಗ ಅವರು ಉತ್ತರಿಸದೆ ಹೋದಾಗ, ಕಿಟಕಿಯ ಮೂಲಕ ಇಣುಕಿ ನೋಡಿದರು. ಆಗ ಅನುಕುಲ್ ರಾವತ್ ಕೋಣೆಯೊಳಗೆ ನೇಣು ಹಾಕಿಕೊಂಡಿದ್ದು ಪತ್ತೆಯಾಗಿತ್ತು.
ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಚಿತಪಡಿಸಿದ್ದಾರೆ. ರಾವತ್ ಅವರ ಕುಟುಂಬಕ್ಕೆ ಸೂಚನೆ ನೀಡಲಾಗಿದ್ದು ಅವರು ಆಗಮಿಸಿದ ನಂತರ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಅನುಕುಲ್ ಮಾನಸಿಕ ಯಾತನೆ ಅನುಭವಿಸುತ್ತಿದ್ದಿರಬಹುದು ಎನ್ನಲಾಗಿದೆ. ಆದರೂ ಆತನ ಆತ್ಮಹತ್ಯೆಗೆ ನಿಖರವಾದ ಕಾರಣ ಅಸ್ಪಷ್ಟವಾಗಿದೆ.

— Sachin Gupta (@SachinGuptaUP) October 18, 2024

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...