ಬಿಲ್ವಪತ್ರೆ ಈಶ್ವರನಿಗೆ ಬಹುಪ್ರಿಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಅದರೆ ಹೊಸ ವಿಷಯವೆಂದರೆ ಇದನ್ನು ಆರೋಗ್ಯ ವೃದ್ಧಿಗೂ ಬಳಸಬಹುದು. ಹೇಗೆನ್ನುತ್ತೀರಾ?
ಬೆಳಗಿನ ತಿಂಡಿಗೆ ಮುನ್ನ, ಬಿಸಿನೀರು ಕುಡಿದಾದ ಬಳಿಕ ಇದರ ಒಂದೆರಡು ಎಲೆಗಳನ್ನು ಬಾಯಿಗೆ ಹಾಕಿ ಜಗಿಯುವುದರಿಂದ ವಾತ, ಪಿತ್ತ, ಕಫದ ಸಮಸ್ಯೆಗಳು ದೂರವಾಗುತ್ತದೆ. ಕಹಿ ಗುಣ ಹೊಂದಿರುವ ಇದನ್ನು ಜಗಿಯಲು ಆರಂಭದಲ್ಲಿ ಕಷ್ಟ ಎನಿಸಿದರೂ ಕ್ರಮೇಣ ಅಭ್ಯಾಸವಾಗುತ್ತದೆ.
ಸದಾ ಹಸಿವಿಲ್ಲ ಎನ್ನುವವರು ಇದನ್ನು ಜಗಿಯುವುದು ಬಹಳ ಮುಖ್ಯ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ತಲೆನೋವಿನ ಸಮಸ್ಯೆ ಇರುವವರು ಈ ಸೊಪ್ಪನ್ನು ಅರೆದು ಹಣೆಗೆ ಹಚ್ಚಿಕೊಳ್ಳಿ. ಅರ್ಧ ಗಂಟೆಯೊಳಗೆ ತಲೆ ನೋವು ಮಾಯವಾಗುತ್ತದೆ.
ವಾರಕ್ಕೆರಡು ಬಾರಿ ಇದನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ನಿತ್ಯ ಬಿಲ್ವಪತ್ರೆಯ ಎರಡು ಚಮಚ ರಸವನ್ನು ಸೇವಿಸಿದರೆ ಸುಸ್ತು, ನಿಶ್ಯಕ್ತಿ ದೂರವಾಗುತ್ತದೆ. ಕೊಳೆಯುವಂಥ ಗಾಯಗಳಾಗಿದ್ದರೆ ಅದಕ್ಕೂ ಬಿಲ್ವಪತ್ರೆಯ ಪೇಸ್ಟ್ ಅತ್ಯುತ್ತಮ ಮದ್ದಾಗಬಲ್ಲದು.