
ಜಗತ್ತಿನಲ್ಲಿ ಚಿತ್ರ-ವಿಚಿತ್ರ ಜನರಿರ್ತಾರೆ. ಅವರ ಹವ್ಯಾಸಗಳು ಭಿನ್ನವಾಗಿರುತ್ತವೆ. ಇದಕ್ಕೆ ಜರ್ಮನಿಯ ಬಿಲಿಯನೇರ್ ಉದ್ಯಮಿಯೊಬ್ಬರ ಪತ್ನಿ ಉತ್ತಮ ನಿದರ್ಶನ. ಮಾಡೆಲ್ ಮಾರಿಸೋಲ್ ಯೊಟ್ಟಾ 2021 ರಲ್ಲಿ ಜರ್ಮನ್ ಬಿಲಿಯನೇರ್ ಉದ್ಯಮಿ ಬಾಸ್ಟಿಯನ್ ಯೊಟ್ಟಾರನ್ನು ವಿವಾಹವಾಗಿದ್ದಾರೆ. ಮಾರಿಸೋಲ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 5 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮಧ್ಯೆ ಅಪರಿಚಿತ ವ್ಯಕ್ತಿ ಜೊತೆ ಡೇಟಿಂಗ್ ಗೆ ಹೋಗಿ 2.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.
ಈ ವಿಷ್ಯವನ್ನು ಮಾರಿಸೋಲ್ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತಿ ಹಾಗೂ ಮಾರಿಸೋಲ್ ಮಧ್ಯೆ ಸ್ಪರ್ಧೆಯಾಗಿತ್ತಂತೆ. ಯಾರು ಹೆಚ್ಚು ಫಾಲೋವರ್ಸ್ ಪಡೆಯುತ್ತಾರೆ ಹಾಗೂ ಯಾರು ಹೆಚ್ಚು ಹಣ ಗಳಿಸ್ತಾರೆ ಎಂಬ ಸ್ಪರ್ಧೆ ಏರ್ಪಟ್ಟಿತ್ತಂತೆ. ಈ ಸ್ಪರ್ಧೆಯ ಅಡಿಯಲ್ಲಿ ಮಾಡೆಲ್ ತನ್ನ ಅಭಿಮಾನಿಯೊಬ್ಬರ ಜೊತೆ ಡೇಟಿಂಗ್ ಗೆ ಹೋಗಲು 2.5 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರಂತೆ. ಅಪರಿಚಿತ ಅಭಿಮಾನಿ ಅದನ್ನು ನೀಡಿದ್ದಾನಂತೆ.
ಬಾಸ್ಟಿಯನ್ ಯೊಟ್ಟಾ ಅತ್ಯಂತ ಐಷಾರಾಮಿ ಜೀವನ ನಡೆಸುವುದ್ರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಕಂಪನಿಯು ತೂಕವನ್ನು ಕಡಿಮೆ ಮಾಡಲು ಮೈಂಡ್ಸ್ಲಿಮ್ಮಿಂಗ್ ಯಂತ್ರ ಸೇರಿದಂತೆ ವಿವಿಧ ಯಂತ್ರಗಳನ್ನು ಉತ್ಪಾದಿಸುತ್ತದೆ. ಜರ್ಮನಿಯಲ್ಲಿದ್ದಾಗ, ಬಾಸ್ಟಿಯನ್ ಗೆ ಐಷಾರಾಮಿ ಜೀವನ ನಡೆಸುವುದು ಕಷ್ಟವಾಗಿತ್ತಂತೆ. ಹಾಗಾಗಿ ಅಮೆರಿಕಕ್ಕೆ ಸ್ಥಳಾಂತರಗೊಂಡಿದ್ದಾರೆ. ಜರ್ಮನಿಯ ಜನರು ತಮ್ಮ ಮೇಲೆ ಅಸೂಯೆ ಪಡುತ್ತಿದ್ದರು. ಹಾಗಾಗಿ ಅಮೆರಿಕಕ್ಕೆ ಶಿಫ್ಟ್ ಆಗಬೇಕಾಯಿತು ಎಂದಿದ್ದಾರೆ.