alex Certify ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಕಾನೂನು ತಿದ್ದುಪಡಿ: ಮಹಿಳೆಯರಿಗೂ ರಾತ್ರಿ ಪಾಳಿಗೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಗೆ ಕಾನೂನು ತಿದ್ದುಪಡಿ: ಮಹಿಳೆಯರಿಗೂ ರಾತ್ರಿ ಪಾಳಿಗೆ ಅವಕಾಶ

ಬೆಂಗಳೂರು: ವಿಧಾನಸಭೆಯಲ್ಲಿ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ 2023 ಕ್ಕೆ ಅನುಮೋದನೆ ನೀಡಲಾಗಿದೆ. ಕಾರ್ಮಿಕರ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆಗಾಗಿ ಕಾನೂನು ತಿದ್ದುಪಡಿ ಮಾಡಲಾಗಿದ್ದು, ಮಹಿಳೆಯರಿಗೂ ರಾತ್ರಿ ಪಾಳಿ ಅವಕಾಶ ಕಲ್ಪಿಸಲಾಗಿದೆ.

ಕೆಲಸದ ಅವಧಿ ಹೆಚ್ಚು ಮಾಡಲು ಬೇಡಿಕೆ ಇತ್ತು. ಕೆಲಸದ ಅವಧಿ ವಿಚಾರದಲ್ಲಿ ಹೈಕೋರ್ಟ್ ಕೂಡ ನಿರ್ದೇಶನ ನೀಡಿದ್ದು, ಸಾಫ್ಟ್ವೇರ್ ಸೇರಿದಂತೆ ವಿವಿಧ ಕ್ಷೇತ್ರದವರದಿಂದ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶ ಹೆಚ್ಚಳಕ್ಕೆ ಕ್ರಮಕೈಗೊಂಡಿದ್ದು, ಯಾವುದೇ ವಾರದಲ್ಲಿ ಗರಿಷ್ಠ 48 ಗಂಟೆಗಳಿಗೆ ಒಳಪಟ್ಟು ಯಾವುದೇ ದಿನದಲ್ಲಿ ವಿರಾಮ ಮಧ್ಯಂತರಗಳನ್ನು ಒಳಗೊಂಡಂತೆ ಪ್ರಸ್ತುತ ಇರುವ ಕೆಲಸದ ಅವಧಿಯನ್ನು 9 ಗಂಟೆಯಿಂದ 12 ಗಂಟೆಯವರೆಗೆ ಹೆಚ್ಚಳ ಮಾಡಲು ತಿದ್ದುಪಡಿಯಲ್ಲಿ ಅವಕಾಶ ನೀಡಲಾಗಿದೆ.

ಪ್ರತಿದಿನದ ಗರಿಷ್ಠ ಕೆಲಸದ ಅವಧಿಯನ್ನು ಅವಧಿ ಮೀರಿದ ಕೆಲಸದ ಸಮಯದಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ದರದಲ್ಲಿ ಮಜೂರಿಯನ್ನು ಕೆಲಸಗಾರನಿಗೆ ಪಾವತಿಸಬೇಕಾದ ಕೆಲಸದ ಸಮಯವನ್ನು ನಿಯಮಿಸಲು ಇದರಿಂದ ಸಾಧ್ಯವಾಗುತ್ತದೆ. ಇದಲ್ಲದೇ ಕೆಲಸದ ಒತ್ತಡ ನಿರ್ವಹಿಸಲು ಹೆಚ್ಚಿನ ಸಮಯದವರೆಗೆ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ಕಾರ್ಖಾನೆಗಳಿಗೆ ಅವಕಾಶ ಸಿಗುತ್ತದೆ.

ರಾತ್ರಿ ವೇಳೆ ಕೆಲಸ ಮಾಡಲು ಆಸಕ್ತಿ ತೋರುವ ಮಹಿಳಾ ಕೆಲಸಗಾರರಿಂದ ಲಿಖಿತ ಒಪ್ಪಿಗೆ ಪಡೆಯಬೇಕು. ದುಡಿಮೆ ಮತ್ತು ಗಳಿಕೆಯಲ್ಲಿ ಸಮಾನತೆ, ಸಮಾನ ಅವಕಾಶ ಕಲ್ಪಿಸಿದಂತೆ ಅವಧಿ ಮೀರಿದ ಕೆಲಸಕ್ಕಾಗಿ ಮಹಿಳಾ ಕೆಲಸಗಾರರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...