ನವದೆಹಲಿ: ಎಲ್ಲಾ ದಾಖಲೆಗಳಿಗೂ ಜನನ ಪ್ರಮಾಣ ಪತ್ರವೇ ಮೂಲ ದಾಖಲೆಯನ್ನಾಗಿ ಬಳಸಲು ಅವಕಾಶ ನೀಡುವ ಜನನ ಮತ್ತು ಮರಣ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಗಿದೆ.
ಶೈಕ್ಷಣಿಕ ಸಂಸ್ಥೆಗಳ ಪ್ರವೇಶ, ಡಿಎಲ್, ಮತದಾರರ ಗುರುತಿನ ಚೀಟಿ, ಆಧಾರ್ ಸಂಖ್ಯೆ, ಮದುವೆ ನೋಂದಣಿ ಮೊದಲಾದವುಗಳ ವೇಳೆ ಜನನ ಪ್ರಮಾಣ ಪತ್ರವನ್ನೇ ಮೂಲ ದಾಖಲೆಗಳನ್ನಾಗಿ ಬಳಸಬೇಕಿದೆ.
ಹೊಸ ಮಸೂದೆ ಡಿಜಿಟಲ್ ಸ್ವರೂಪದಲ್ಲಿ ಜನನ, ಮರಣ ನೋಂದಣಿ, ಡಿಜಿಟಲ್ ಸ್ವರೂಪದಲ್ಲೇ ಪ್ರಮಾಣ ಪತ್ರ ವಿತರಿಸುವ ಅವಕಾಶ ಹೊಂದಿದ್ದು, ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.