ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಂದಿನಿಂದ ಆಟೋ, ಬೈಕ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಟ್ರ್ಯಾಕ್ಟರ್, ಕ್ವಾಡ್ರಿ ಚಕ್ರಗಳ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಅನಧಿಕೃತವಾಗಿ ಈಗಾಗಲೇ ಪ್ರವೇಶವನ್ನು ನಿರ್ಬಂಧಿಸಲಾಗಿತ್ತಾದರೂ ಇದೀಗ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ನಿರ್ಬಂಧ ವಿಧಿಸಲಾಗಿರುವ ವಾಹನಗಳು ಕಡ್ಡಾಯವಾಗಿ ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸಲು ಸೂಚಿಸಲಾಗಿದೆ.
ಒಂದೊಮ್ಮೆ ನಿಯಮ ಮೀರಿ ಈ ವಾಹನಗಳು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸಿದರೆ 500 ರೂಪಾಯಿ ದಂಡ ಪಾವತಿಸಬೇಕಿದ್ದು, ಇದರ ಪರಿಶೀಲನೆಗಾಗಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ಒಟ್ಟು 9 ಕಡೆ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತದೆ.
ಇನ್ನು ಎಕ್ಸ್ ಪ್ರೆಸ್ ವೇ ನಲ್ಲಿ ಚಲಿಸುವ ವಾಹನಗಳಿಗೂ ವೇಗಮಿತಿಯನ್ನು ನಿಗದಿಪಡಿಸಲಾಗಿದ್ದು, ಎಡ ಭಾಗದಲ್ಲಿ ಸಂಚರಿಸುವ ವಾಹನಗಳು 60 ಕಿ.ಮೀ., ಮಧ್ಯದಲ್ಲಿ ಸಂಚರಿಸುವ ವಾಹನಗಳು 80 ಕಿ.ಮೀ. ಹಾಗೂ ಬಲ ಭಾಗದಲ್ಲಿ ಚಲಿಸುವ ವಾಹನಗಳು 100 ಕಿಲೋಮೀಟರ್ ಗರಿಷ್ಠ ಮಿತಿ ಮೀರದಂತೆ ತಿಳಿಸಲಾಗಿದೆ.