ಬೀಜಿಂಗ್: ಬೈಕ್‍ನಲ್ಲಿ ಬರುತ್ತಿದ್ದ ಸವಾರನಿಗೆ ‘ಧೋ’ ಎಂದು ಸುರಿಯುತ್ತಿದ್ದ ಮಳೆಯು ಪೂರ್ಣ ನೆನೆಯುವಂತೆ ಮಾಡಿತ್ತು. ಅದರ ನಡುವೆ ಟ್ರಾಫಿಕ್ ಸಿಗ್ನಲ್ ಕೂಡ ಎದುರಾಗಿತ್ತು. ಎಷ್ಟು ಕಾದರೂ ಹಸಿರು ಚಿಹ್ನೆ ಕಾಣದ ಹಿನ್ನೆಲೆಯಲ್ಲಿ ಬೇಸತ್ತ ಸವಾರ, ತನ್ನ ಬ್ಯಾಗ್‍ನಲ್ಲಿದ್ದ ಶ್ಯಾಂಪೂವನ್ನು ಹೊರತೆಗೆದು ಶರ್ಟ್ ಕಳಚಿ, ಸ್ನಾನಕ್ಕೇ ನಿಂತುಬಿಟ್ಟಿದ್ದಾನೆ.
ಹೌದು, ಪೂರ್ವ ಚೀನಾದ ನಾಂಜಿಂಗ್‍ನಲ್ಲಿ ಈ ಘಟನೆ ನಡೆದಿದೆ.
ಅನಾರೋಗ್ಯಕ್ಕೆ ಕಾರಣವಾಗುತ್ತೆ ಆಹಾರ ಸೇವನೆ ವೇಳೆ ಮಾಡುವ ಈ ತಪ್ಪು
ಆರಾಮಾಗಿ ಮಳೆಯಲ್ಲಿ ತಲೆಯನ್ನು ತೊಳೆದುಕೊಂಡು, ಪೂರ್ಣ ಸ್ನಾನ ಮುಗಿಸಿದ ಮೇಲೆ ಶರ್ಟ್ ಧರಿಸಿ ಬೈಕ್ ಓಡಿಸಿಕೊಂಡು ಹೋಗಿದ್ದಾನೆ. ಸಿಗ್ನಲ್‍ನಲ್ಲಿದ್ದ ಕ್ಯಾಮೆರಾದಲ್ಲಿ ಎಲ್ಲ ಚಟುವಟಿಕೆಯೂ ರೆಕಾರ್ಡ್ ಆಗಿದೆ. ಪೊಲೀಸರು ಈತನನ್ನು ಪತ್ತೆ ಮಾಡಿ ವಿಚಾರಿಸಿದಾಗ, ಸ್ವಿಮ್ಮಿಂಗ್ ಪೂಲ್‍ನಲ್ಲಿ ಈಜುತ್ತಿದ್ದಾಗ ಮಳೆ ಬಂದಿತು. ಆಗ ತನ್ನ ಮೂಡ್ ಹಾಳಾಯಿತು, ಅದನ್ನು ಸರಿಪಡಿಸಿಕೊಳ್ಳಲು ಮಳೆಯಲ್ಲೇ ಶ್ಯಾಂಪೂ ಸ್ನಾನ ಮಾಡಿದೆ ಎಂದಿದ್ದಾನೆ ಭೂಪ.