ಬೈಕರ್ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ.
ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್ ಬೈಕ್ ಮೇಲೆ ನಿಯಂತ್ರಣ ತಪ್ಪಿ, ಬ್ರೇಕ್ ಹಾಕುವ ಮುನ್ನವೇ ಬಸ್‌ಗೆ ಗುದ್ದಿಕೊಂಡಿದ್ದಾರೆ. ಕೂಡಲೇ ಬೈಕ್‌ನಿಂದ ಕೆಳಗೆ ಬಿದ್ದ ಬೈಕ್ ಸವಾರ ಬಸ್ ಅಡಿ ಸಿಲುಕಿದ್ದಾನೆ.
ಬೈಕ್ ಸವಾರನ ಅದೃಷ್ಟಕ್ಕೆ ಬಸ್ ಚಾಲಕ ಸರಿಯಾದ ಕ್ಷಣದಲ್ಲಿ ಬ್ರೇಕ್ ಹಾಕಿದ್ದಾರೆ. ಕೂಡಲೇ ಮೇಲೆದ್ದ ಬೈಕರ್ ತನ್ನ ಬೈಕ್‌ನತ್ತ ತೆರಳುತ್ತಿದ್ದು, ಆತನ ಬೈಕ್ ಎತ್ತಿಕೊಳ್ಳಲು ಮತ್ತೊಬ್ಬ ಸವಾರ ಸಹಾಯ ಮಾಡುತ್ತಿರುವುದನ್ನು 48 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ನೋಡಬಹುದಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್….! ಇದಕ್ಕೆ ಕಾರಣನಾದ ನಟ ಯಾರು ಗೊತ್ತಾ….?
ದಾಹೋದ್-ಗೋದ್ರಾ ಹೆದ್ದಾರಿಯಲ್ಲಿ ಜರುಗಿದೆ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕರ್ ಅಪಾಯದಿಂದ ಪಾರಾಗಿದ್ದನ್ನು ಕಂಡ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.