ಎಕ್ಸ್‌ಪ್ರೆಸ್ ರೈಲು ಒಂದು ಕಡೆಯಿಂದ ನುಗ್ಗುತ್ತಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಜನರು ಹಿಂದೆ ಸರಿದಿದ್ದಾರೆ. ಒಬ್ಬ ಬೈಕ್ ಸವಾರ ಮಾತ್ರ ರೈಲು ಬರುವ ಮುನ್ನವೇ ಹಳಿಯನ್ನು ದಾಟಿಬಿಡಬೇಕು ಎಂಬ ಅವಸರದಲ್ಲಿ ನುಗ್ಗುತ್ತಾನೆ.
ಅದೃಷ್ಟವಶಾತ್ ಆತನಿಗೆ ರೈಲು ತನಗಿಂತ ವೇಗವಾಗಿ ಬಂದು ಗುದ್ದಲಿದೆ ಎನ್ನುವ ಮನವರಿಕೆ ಕ್ಷಣ ಮಾತ್ರದಲ್ಲಿ ಆಗುತ್ತದೆ. ಬೈಕ್ ಮಲಗಿಸಿ ಕೂಡಲೇ ಹಿಂದಿರುಗುತ್ತಾನೆ. ಬೈಕ್ ಮೇಲೆ ಹರಿದ ರಾಜಧಾನಿ ಎಕ್ಸ್‌ಪ್ರೆಸ್, ಬೈಕ್ ಅನ್ನು ಪೀಸ್ ಪೀಸ್ ಮಾಡಿಬಿಡುತ್ತದೆ.
ಇಂಥದ್ದೊಂದು ಭಯಾನಕ ಘಟನೆಯ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ರಾಜೇಂದ್ರ ಅಕ್ಲೇಕರ್ (@rajtoday) ಅವರ ಖಾತೆಯಲ್ಲಿ ವಿಡಿಯೊ ಕಾಣಬಹುದು. ದೊಡ್ಡ ನಗರದ ಹೊರವಲಯದಲ್ಲಿನ ಕ್ರಾಸಿಂಗ್ ಗೇಟ್ ಬಳಿ ಘಟನೆ ನಡೆದಿದೆ. ಹಲವು ಜನರು, ವಾಹನಗಳು ರೈಲ್ವೆ ಗೇಟ್ ಬಳಿ ನಿಂತಿರುವುದನ್ನು ಕಾಣಬಹುದು. ಅವರೆಲ್ಲರೂ ರೈಲು ಪಾಸ್ ಆದ ಬಳಿಕ ಹಳಿಯನ್ನು ದಾಟಿಕೊಂಡು ಎದುರಿನ ಮಾರ್ಗ ಹಿಡಿಯಲು ಯತ್ನಿಸುತ್ತಿದ್ದಾರೆ.
60 ವರ್ಷದ ದಿನಗೂಲಿ ನೌಕರನೀಗ ಸೂಪರ್ ಮಾಡೆಲ್….!
ಆದರೆ, ಅವಸರದ ಗಿರಾಕಿ ಒಬ್ಬ ಮಾತ್ರ ಬೈಕ್ ನುಗ್ಗಿಸಿಕೊಂಡು ಬರುತ್ತಾರೆ. ಇನ್ನೇನು ವೇಗವಾಗಿ ಹಳಿಯನ್ನು ದಾಟಿಯೇ ಬಿಡುತ್ತಾನೆ ಎನ್ನುವಷ್ಟರಲ್ಲಿ ಆತನ ಮನಸ್ಸು ಹೇಳುತ್ತದೆ. ಸಾಯುತ್ತೀಯಾ, ಓಡು ಎಂದು ! ಬೈಕ್ ಅಲ್ಲಿಯೇ ಹಳಿ ಮೇಲೆ ಮಲಗಿಸಿದ ಭೂಪ, ಹಿಂದಕ್ಕೆ ಓಡಿ ಬರುತ್ತಾನೆ. ಬೈಕ್‌ಗೆ ಅಪ್ಪಳಿಸಿದ ರಾಜಧಾನಿ ಎಕ್ಸ್‌ಪ್ರೆಸ್ ಪೂರ್ಣವಾಗಿ ಬೈಕ್ ಅನ್ನು ಛಿದ್ರಗೊಳಿಸುತ್ತದೆ.