
ಬೆಂಗಳೂರು: ಮಾರಕಾಸ್ತ್ರಗಳನ್ನು ಹಿಡಿದು ಮಧ್ಯರಾತ್ರಿ ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಗುಂಪನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಫೆ.13ರದು ಶಬ್ ಎ ಬಾರತ್ ಹಬ್ಬ ದ ಹಿನೆಲೆಯಲ್ಲಿ 25ಕ್ಕೂ ಹೆಚ್ಚು ಜನರು ಕೆ.ಜಿ.ಹಳ್ಳಿಯ ನೂರ್ ಮಸೀದಿ ಬಳಿ ಸೇರಿದ್ದರು. ಈ ವೇಳೆ ರೀಲ್ಸ್ ಹುಚ್ಚಾಟಕ್ಕಾಗಿ ಪುಂಡರ ಗ್ಯಾಂಗ್ ಬೈಕ್ ಗಳಲ್ಲಿ ತ್ರಿಬಲ್ ರೈಡ್ ಹೋಗಿದ್ದಲ್ಲದೇ ಹೊಸಕೋಟೆ ಟೋಲ್ ವರೆಗೂ ಹೋಗಿ ವಾಪಾಸ್ ಬಂದಿದೆ. ಹೀಗೆ ತ್ರಿಬಲ್ ರೈಡ್ ನಲ್ಲಿಯೇ ಮಾರಕಾಸ್ತ್ರ್ಗಗಳನ್ನು ಹಿಡಿದು ವ್ಹೀಲಿಂಗ್ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿಯೂ ಪುಂಡರ ವ್ಹೀಲಿಂಗ್ ಹುಚ್ಚಾಟ ವೈರಲ್ ಆಗಿತ್ತು. ಇದೀಗ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗಿದೆ.