
ರಾಯಚೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಳ್ಳೂರು ಕ್ಯಾಂಪ್ ಬಳಿ ಎರಡು ಬೈಕ್ ಮಧ್ಯೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.
ಸಿಂಧನೂರು ತಾಲೂಕಿನ ಬಸ್ಸಾಪುರ ಗ್ರಾಮದ ಶಿವಪ್ಪ ಹುಸೇನಪ್ಪ(37) ಹಾಗೂ ಕೋಳಬಾಳ ಗ್ರಾಮದ ನಿವಾಸಿ ಮೌನೇಶ್ ಮಹದೇವ(20), ಚಿಕ್ಕಬೇರಗಿ ಗ್ರಾಮದ ನಿವಾಸಿ ಹನುಮೇಶ್(24) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಶಿವಪ್ಪ ತನ್ನ ಬೈಕ್ ನಲ್ಲಿ ಸಿಂಧನೂರಿನಿಂದ ಬಸಾಪುರಕ್ಕೆ ತೆರಳುತ್ತಿದ್ದರು. ಇನ್ನೊಂದು ಬೈಕ್ ನಲ್ಲಿ ಮಸ್ಕಿಯಿಂದ ಮೌನೇಶ್ ಮತ್ತು ಹನುಮೇಶ್ ಬರುತ್ತಿದ್ದರು. ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.