
ವ್ಯಕ್ತಿಯೊಬ್ಬ ದ್ವಿಚಕ್ರ ವಾಹನವನ್ನೇ ತನ್ನ ಕಾರಿನಂತೆ ಮಾಡಿಕೊಂಡಿದ್ದಾನೆ. ಒಂದೇ ಮೊಟಾರ್ ಸೈಕಲ್ ನಲ್ಲಿ ಒಂಭತ್ತು ಮಂದಿ ಪ್ರಯಾಣಿಸಿರುವ ವಿಡಿಯೋ ವೈರಲ್ ಆಗಿದೆ.
ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಜೈವರ್ಧನ್ ಸಿಂಗ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಗನಕ್ಕೇರಿದರ ಪರಿಣಾಮ, ಸಾರ್ವಜನಿಕರು ಹೊಸ ವಿಮಾನ ತಯಾರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದರೆ, ಅದರೊಂದಿಗೆ ರೆಕ್ಕೆಯಂತಹ ಮರದ ಹಲಗೆಗಳನ್ನು ಜೋಡಿಸಲಾಗಿದೆ. ಹಲಗೆಯಲ್ಲಿ ಮಹಿಳೆಯರು ಕೂತಿದ್ದು, ಒಟ್ಟು ಒಂಭತ್ತು ಮಂದಿ ಇದರಲ್ಲಿ ಪ್ರಯಾಣ ಮಾಡಿದ್ದಾರೆ. ಬೈಕ್ ರೈಡರ್ ಜೊತೆಗೆ ಐವರು ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಕೂತು ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.