
ಶಿವಮೊಗ್ಗ: ಬೈಕ್ ಮಾರ್ಪಡಿಸಿ ಕರ್ಕಶವಾದ ಹಾರ್ನ್ ಅಳವಡಿಸಿ ಪುಂಡಾಟ ಮೆರೆಯುತ್ತಿದ್ದ ಯುವವಕನೊಬ್ಬನಿಗೆ ಶಿವಮೊಗ್ಗ ಕೋರ್ಟ್ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ 19 ವರ್ಷದ ಧನಂಜಯ ಎಂಬ ಯುವಕ ತನ್ನ ಬಳಿ ಇದ್ದ ಬಜಾಜ್ ಕವಾಸಕಿ ಬೈಕ್ ನ್ನು ಆರ್.ಎಕ್ಸ್-100 ರೀತಿ ಕಾಣುವಂತೆ ಮಾರ್ಪಡಿಸಿ, ಅದಕ್ಕೆ ಕರ್ಕಶ ಹಾರ್ನ್ ಅಳವಡಿಸಿದ್ದ. ಯುವಕನ ಬೈಕ್ ಶಬ್ದದಿಂದ ಕಿರಿಕಿರಿ ಅನುಭವಿಸಿದ ಸಾರ್ವಜನಿಕರು ಪೂರ್ವ ಸಂಚಾರಿ ಠಾಣೆಯಲ್ಲಿ ದೂರು ನೀಡಿದ್ದರು.
ಸಬ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಮಠಪತಿ, ಯುವಕನ ಬೈಕ್ ಪತ್ತೆ ಮಾಡಿ ವಶಕ್ಕೆ ಪಡೆದಿದ್ದರು. ಅಲ್ಲದೇ ಯುವಕನ ವಿರುದ್ಧ ಐಎಂವಿ ಕಾಯ್ದೆಯಡಿ ಲಘು ಪ್ರಕರಣ ದಾಖಲಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗಿತ್ತು.
ಇದೀಗ ಶಿವಮೊಗ್ಗ 3ನೇ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಯುವಕನಿಗೆ 16,500 ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.