
ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘಿಸಿ ಅಪ್ರಾಪ್ತನ ಕೈಗೆ ಬೈಕ್ ಕೊಟ್ಟಿದ್ದ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ಅ. 18 ರಂದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಟಾಕೀಸ್ ನ ರಸ್ತೆಯಲ್ಲಿ 16 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬ ಕೆಎ-14 ಇಆರ್-1884 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಹೆಲ್ಮೆಟ್ ಧರಿಸದೇ ಮತ್ತು ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರದೇ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದ.
ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಆತನ ತಂದೆ ಆಸಿಫ್ ಬಾಷಾ(46) ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ನೀಡಲಾಗಿತ್ತು.
ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ತೀರ್ಥಹಳ್ಳಿಯ ನ್ಯಾಯಾಧೀಶರು ದ್ವಿಚಕ್ರ ವಾಹನದ ಮಾಲೀಕರಾದ ಬಾಲಕನ ತಂದೆ ಆಸಿಫ್ ಬಾಷಾ ಅವರಿಗೆ 25,000 ರೂ. ದಂಡ ವಿಧಿಸಿರುತ್ತಾರೆ.