ಭಾರತದಲ್ಲಿ ಹೆಚ್ಚಿನ ಜನರು ಉತ್ತಮ ಮೈಲೇಜ್ ನೀಡುವ ವಾಹನ ಖರೀದಿಗೆ ಮುಂದಾಗ್ತಾರೆ. ಉತ್ತಮ ಇಂಧನ ದಕ್ಷತೆ ವಾಹನಗಳು ಸಾಮಾನ್ಯವಾಗಿ ಕಾರ್ಯಕ್ಷಮತೆಯನ್ನು ಹೊಂದಿರುವುದಿಲ್ಲ. ಸರಿಯಾಗಿ ಬೈಕ್ ಓಡಿಸಿದ್ರೆ ಹಾಗೂ ಅದ್ರ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ ಮೈಲೇಜ್ ಪಡೆಯಬಹುದು. ಬೈಕ್ ನಲ್ಲಿ ಹೆಚ್ಚು ಮೈಲೇಜ್ ಬೇಕು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.
ಬೈಕ್ ವೇಗವಾಗಿ ಓಡಿಸುವವರು ನೀವಾಗಿದ್ದರೆ ಉತ್ತಮ ಮೈಲೇಜ್, ಕನಸಿನ ಮಾತು. ಮಿತಿಮೀರಿದ ವೇಗವು ಮೈಲೇಜ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಉತ್ತಮ ಮೈಲೇಜ್ ಪಡೆಯಲು ವಾಹನದ ವೇಗವನ್ನು ಗಂಟೆಗೆ 50 ರಿಂದ 60 ಕಿ.ಮೀ. ಯಂತೆ ಓಡಿಸಬೇಕು.
ನೀವು ಯಾವಾಗ ಗೇರ್ ಬದಲಾವಣೆ ಮಾಡುತ್ತೀರಿ ಎಂಬುದು ಕೂಡ ಮೈಲೇಜ್ ಅವಲಂಬಿಸಿದೆ. ಎರಡನೇ ಅಥವಾ ಮೂರನೇ ಗೇರ್‌ನಲ್ಲಿ ವೇಗದಲ್ಲಿ ಬೈಕ್ ಓಡಿಸೋದು ಮೋಟಾರ್‌ಸೈಕಲ್‌ನ ಮೈಲೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ನೀವು ನಿಯಮಿತವಾಗಿ ಬೈಕ್ ಸರ್ವಿಸಿಂಗ್ ಮಾಡಿಸಬೇಕು. ನೀವು ಸರಿಯಾದ ಸಮಯಕ್ಕೆ ಮಾಡಿಸುವ ಸರ್ವಿಸಿಂಗ್ ನಿಮ್ಮ ಬೈಕ್ ಮೈಲೇಜ್ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.
ಟೈರ್ ಗಾಳಿ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ನೀವು ಉತ್ತಮ ಮೈಲೇಜ್ ಹಾಗೂ ಕಾರ್ಯಕ್ಷಮತೆ ಬಯಸಿದ್ದರೆ ಬೈಕ್ ಟೈರ್ ಗಾಳಿ ಒತ್ತಡವನ್ನು ಸರಿಯಾಗಿ ಕಾಪಾಡಿಕೊಳ್ಳಿ.
ಮೈಲೇಜ್ ಸುಧಾರಿಸಲು, ಬೈಕ್‌ನ ಏರ್ ಫಿಲ್ಟರ್ ಅನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸುವುದು ಮುಖ್ಯವಾಗುತ್ತದೆ. ಸರ್ವಿಸ್ ಸಮಯದಲ್ಲಿ ಬೈಕ್ ನಲ್ಲಿ ಏನಾದರೂ ತೊಂದರೆಯಾದರೆ ಅದನ್ನು ತಪ್ಪದೆ ಸರಿಪಡಿಸಿ.