ಮಂಗಳೂರು: ರಾಜ್ಯದಲ್ಲಿ ಸಾಲು ಸಾಲು ಅಪಘಾತಗಳು ಸಂಭವಿಸಿದ್ದು, ಮಂಗಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರನ ಮೇಲೆಯೇ ಲಾರಿ ಹರಿದಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿದೆ. ಬೈಕ್ ಹಿಂಬದಿ ಬರುತ್ತಿದ್ದ ಲಾರಿ ಏಕಾಏಕಿ ತಿರುವು ಪಡೆದಿದ್ದು ಬೈಕ್ ಸವಾರನ ಮೇಲೆಯೇ ಹರಿದು ಹೋಗಿದೆ. ಬೈಕ್ ಸವಾರ ಗಿರೀಶ್ ಸೊಂಟ, ಬಲ ಕೈ ಮೇಲೆ ಲಾರಿ ಹರಿದಿದೆ. ಗಿರೀಶ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.