ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್ ಮಾರುಕಟ್ಟೆಗೆ ತಂದಿದೆ ಹಾರ್ಲೆ.
X-350 ಹಾಗು X-500 ಅವತಾರದಲ್ಲಿ ತನ್ನ ಅತ್ಯಂತ ಕಿರಿದಾದ ಬೈಕುಗಳನ್ನು ಚೀನಾದ ಮಾರುಕಟ್ಟಗೆ ಬಿಡುಗಡೆ ಮಾಡಿದೆ ಹಾರ್ಲೆ ಡೇವಿಡ್ಸನ್. 500ಸಿಸಿ ಅವಳಿ ಸಿಲಿಂಡರ್‌ನೊಂದಿಗೆ ಬರುವ X-500 ತನ್ನ ಸಣ್ಣ ಎಲ್‌ಇಡಿ ಹೆಡ್‌ಲೈಟ್ ಹಾಗೂ ಶಾರ್ಟ್ ರಿಯರ್ ಫೈಂಡರ್‌ಗಳೊಂದಿಗೆ ಆಕರ್ಷಕವಾಗಿದೆ. ಈ ಬೈಕ್ ಬೆನೆಲ್ಲಿ ಲಿಯೋನ್ಸಿನೋ 500ನೊಂದಿಗೆ ಅನೇಕ ಸಾಮ್ಯತೆಗಳನ್ನು ಹೊಂದಿದೆ.
13 ಲೀಟರ್ ಸಾಮರ್ಥ್ಯದ ಮಸ್ಕುಲರ್ ಇಂಧನ ಟ್ಯಾಂಕ್ ಹೊಂದಿರುವ X-500ನಲ್ಲಿ ಸಿಂಗಲ್-ಪೀಸ್ ಸೀಟು ಅಳವಡಿಸಲಾಗಿದೆ. ಈ ಬೈಕ್ ಮೂರು ಬಣ್ಣಗಳಲ್ಲಿ – ಕಪ್ಪು, ಕಿತ್ತಳೆ ಹಾಗೂ ಬೆಳ್ಳಿ ಬಣ್ಣಗಳಲ್ಲಿ ಲಭ್ಯವಿದೆ.
500ಸಿಸಿ ಲಿಕ್ವಿಡ್-ಕೂಲ್ಡ್, ಸಮನಾಂತರ ಅವಳಿ ಮೋಟರ್ ಮೂಲಕ 47.5ಪಿಎಸ್ ಹಾಗೂ 46ಎನ್‌ಎಮ್ ಶಕ್ತಿಯನ್ನು ಉತ್ಪಾದಿಸಬಲ್ಲ X-500ಯ ತೂಕ 208 ಕೆಜಿ ಇದೆ. ಆರು-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ X-500 20.8ಕಿಮೀ/ಲೀ ಮೈಲೇಜ್ ಕೊಡುವುದಾಗಿ ಹಾರ್ಲೆ ಡೇವಿಡ್ಸನ್ ಹೇಳಿಕೊಂಡಿದೆ.
ಮಿಕ್ಕಂತೆ ಸೆಮಿ ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಲೈಟಿಂಗ್, ರೈಡರ್-ಏಡ್‌ನಂಥ ಆಕರ್ಷಕ ಫೀಚರ್‌ಗಳನ್ನು ಹಾರ್ಲೇ ಡೇವಿಡ್ಸನ್ ತನ್ನ X-500ನಲ್ಲಿ ಕೊಡಮಾಡಿದೆ.
ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಬೈಕ್ ಭಾರತದಲ್ಲಿ ಬರುವ ಸಾಧ್ಯತೆ ಇಲ್ಲ. ಭಾರತದಲ್ಲಿ X-400 ಬೈಕ್ ಬರಲು ಸಜ್ಜಾಗಿದ್ದು, ಅದರ ಚಿತ್ರಗಳು ಒಂದಷ್ಟು ಸೋರಿಕೆಯಾಗಿ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ.