
ಚಾಮರಾಜನಗರ: ತ್ರಿಬಲ್ ರೈಡಿಂಗ್ ವೇಳೆ ಆಯತಪ್ಪಿ ಬಿದ್ದ ಬೈಕ್ ಸವಾರರ ಮೇಲೆ ವಾಹನ ಹರಿದು ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಸಮೀಪ ಘಟನೆ ನಡೆದಿದೆ. ಬ್ಯಾಡಮೂಡ್ಲು ಗ್ರಾಮದ ಅಭಿಷೇಕ್(23), ಅಭಿ(21) ಮೃತಪಟ್ಟವರು ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಾದೇವ ಅವರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.