alex Certify ತ್ರಿವರ್ಣ ಧ್ವಜ ಹಂಚಿದ್ದಕ್ಕಾಗಿ ತಲೆ ಕಡಿಯುವ ಬೆದರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿವರ್ಣ ಧ್ವಜ ಹಂಚಿದ್ದಕ್ಕಾಗಿ ತಲೆ ಕಡಿಯುವ ಬೆದರಿಕೆ…!

ದೇಶದಾದ್ಯಂತ 75ನೇ ಸ್ವಾತಂತ್ರ್ಯ ಹಬ್ಬದ ಆಚರಣೆ ಸಂಭ್ರಮದಿಂದ ಮಾಡಲಾಗಿದೆ. ಅಗಸ್ಟ್ 15ರಂದು ಇಡೀ ದೇಶವೇ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಮಿಂದೆದ್ದ ಹಾಗಿತ್ತು. ಎಲ್ಲಿ ನೋಡಿದ್ರೂ ತ್ರಿವರ್ಣ ಧ್ವಜ ರಾರಾಜಿಸುತ್ತಿತ್ತು. ಅದು ನೋಡೋದೇ ಒಂದು ಖುಷಿ. ಒಂದು ಕಡೆ ಹಬ್ಬದ ವಾತಾವರಣ ಮನೆ ಮಾಡಿದ್ರೆ, ಇನ್ನೊಂದು ಕಡೆ ದೇಶ ವಿರೋಧಿಗಳು ಕುಟುಂಬವೊಂದಕ್ಕೆ ಬೆದರಿಕೆ ಪತ್ರವೊಂದನ್ನ ಕಳುಹಿಸಿದ್ಧಾರೆ. ಅ ಪತ್ರದಲ್ಲಿ ಬರೆದ ವಿಷಯವನ್ನ ಓದಿ ಆ ಕುಟುಂಬ ಬೆಚ್ಚಿಬಿದ್ದಿದೆ.

ಇದು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದ ಘಟನೆ. ತ್ರಿವರ್ಣ ಧ್ವಜವನ್ನ ಮನೆ-ಮನೆಗೆ ಹಂಚಿದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಶಿರಚ್ಛೇದನ ಮಾಡುವ ಬೆದರಿಕೆ ಬಂದಿದೆ. ದುಷ್ಕರ್ಮಿಗಳು ಪತ್ರದ ಮೂಲಕ ಬೆದರಿಕೆ ಸಂದೇಶ ಬರೆದು ಅಂಗನವಾಡಿ ಕಾರ್ಯಕರ್ತೆಯ ಮನೆಯ ಹೊರಗೆ ಅಂಟಿಸಿ ಹೋಗಿದ್ದಾರೆ. ಮನೆಯ ಹೊರಗೆ ಇಂತಹ ಬೆದರಿಕೆ ಪತ್ರ ಬಂದಿರುವುದರಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅವರ ಕುಟುಂಬದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪತ್ರ ಬಂದ ನಂತರ ಅಂಗನವಾಡಿ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭವಿಸಿದ್ದಾರೆ. ಅಷ್ಟೇ ಅಲ್ಲ ಕುಟುಂಬಕ್ಕೂ ಭದ್ರತೆಯನ್ನ ಕೊಟ್ಟಿದ್ದಾರೆ. ಒಂದು ಮಾಹಿತಿಯ ಪ್ರಕಾರ ಈ ಪ್ರಕರಣವು ಬಿಜ್ನೋರ್ ಜಿಲ್ಲೆಯ ಕಿರಾತ್ಪುರ ಪ್ರದೇಶದಾಗಿದೆ. ಇಲ್ಲಿನ ಅರುಣಕುಮಾರ್‌ ಕಶ್ಯಪ್ ಅವರ ಪತ್ನಿ ಶಶಿಬಾಲಾಬಾಯಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಹೋಟೆಲ್ ಒಂದನ್ನ ನಡೆಸುತ್ತಿದ್ಧಾರೆ. ‘ಹರ್ ಘರ್ ತಿರಂಗಾ‘ ಅಭಿಯಾನದ ಭಾಗವಾಗಿ ಶಶಿಬಾಲಾ 13 ಮತ್ತು14ರಂದು ರಾಷ್ಟ್ರಧ್ವಜವನ್ನ ಮನೆ ಮನೆಗೆ ಹೋಗಿ ವಿತರಿಸಿದ್ದಾರೆ.

ಅಗಸ್ಟ್ 15ರ ಬೆಳಿಗ್ಗೆ ಎಂದಿನಂತೆ ಮನೆ ಬಾಗಿಲು ತೆರೆದಾಗ, ಬಾಗಿಲಿನ ಮೇಲೆ ಕರಪತ್ರವನ್ನ ಅಂಟಿಸಿರುವುದನ್ನ ಕಶ್ಯಪ್ ಅವರ ಮನೆಯವರು ನೋಡಿದ್ದಾರೆ. ಅದನ್ನ ಓದಿದಾಗ ಕುಟುಂಬದವರೆಲ್ಲರೂ ಹೌಹಾರಿ ಹೋಗಿದ್ದಾರೆ. ಕರಪತ್ರದ ಕೆಳಭಾಗದಲ್ಲಿ ಐಎಸ್ಐ ಬೆಂಬಲಿಗ ಎಂದು ಬರೆಯಲಾಗಿತ್ತು. ಇಷ್ಟು ಮಾತ್ರವಲ್ಲದೆ, ಅಂತಹ ಇನ್ನೂ ಎರಡು ಕರಪತ್ರ ಮನೆಯ ಮುಂಭಾಗದ ಒಂದು ಅಂಗಡಿಗೆ ಅಂಟಿಸಲಾಗಿದೆ. ಜೊತೆಗೆ ಅಲ್ಲೇ ಇರುವ ಫಾಸ್ಟ್‌ಫುಡ್ ಕೋರ್ಟ್‌‌ನಲ್ಲಿ ಅಂಟಿಸಿರುವುದು ಕಂಡು ಬಂದಿದೆ. ಇಂತಹ ಬೆದರಿಕೆಗಳು ಬಂದಿದ್ದರಿಂದ ಅರುಣಕುಮಾರ್‌ ಕುಟುಂಬದವರು ಭಯಭೀತರಾಗಿದ್ದಾರೆ.

ಅದೇ ವೇಳಗೆ ಇಂತಹ ಬೆದರಿಕೆ ಕರಪತ್ರಗಳು ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಲ್ಲಾ ಕರಪತ್ರಗಳನ್ನು ತಮ್ಮ ವಶಕ್ಕೆ ಪಡೆದು ಪ್ರಕರಣ ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯ ಕುಟುಂಬದವರ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಎಸ್ಪಿ ಪ್ರವೀಣ್ ರಂಜನ್ ತಿಳಿಸಿದ್ದಾರೆ. ಇದರೊಂದಿಗೆ ಕುಟುಂಬಕ್ಕೆ ಭದ್ರತೆ ಒದಗಿಸಲಾಗಿದೆ. ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನಾವು ಎಚ್ಚರ ವಹಿಸಿದ್ದೇವೆ. ಅವರಿಗೆ ಭದ್ರತೆಯನ್ನೂ ನೀಡಿದ್ದೇವೆ. ತನಿಖೆ ಚುರುಕುಗೊಳಿಸಲಾಗಿದೆ ಎಂದು ರಂಜನ್ ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...