alex Certify Big News: 88 ವರ್ಷದ ಬಳಿಕ ಮಿಥಿಲಾಂಚಲಕ್ಕೆ ರೈಲು ಸಂಪರ್ಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: 88 ವರ್ಷದ ಬಳಿಕ ಮಿಥಿಲಾಂಚಲಕ್ಕೆ ರೈಲು ಸಂಪರ್ಕ

ಬಿಹಾರದ ಮಿಥಿಲಾಂಚಲಕ್ಕೆ 88 ವರ್ಷಗಳ ನಂತರ ರೈಲ್ವೆ ಮಾರ್ಗ ಸಿಕ್ಕಿದೆ. ಝಂಜರ್ಪುರ-ಸಹರ್ಸಾ ರೈಲು ಸೇವೆ ಮಿಥಿಲಾಂಚಲಕ್ಕೆ ಲಭ್ಯವಾಗಿದೆ. ಹೊಸದಾಗಿ ಉದ್ಘಾಟನೆಗೊಂಡ ರೈಲ್ವೇ ವಿಭಾಗದಲ್ಲಿ, 3 ಜೋಡಿ ಹೊಸ ಡೆಮು ವಿಶೇಷ ರೈಲುಗಳು ಮೇ 8 ರಿಂದ ಲಹೇರಿಯಾಸಾರೈಯಿಂದ ದರ್ಬಂಗಾ, ಸಕ್ರಿ, ಝಂಜರ್‌ಪುರ, ತಮುರಿಯಾ, ನಿರ್ಮಲಿ, ಸರೈಗಢ್ ಮತ್ತು ಸುಪೌಲ್ ಮೂಲಕ ಸಹರ್ಸಾಗೆ ಸಂಚರಿಸುತ್ತವೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಝಂಜರ್‌ಪುರ-ನಿರ್ಮಲಿ ಹೊಸದಾಗಿ ಗೇಜ್ ಮಾಡಿದ ಪರಿವರ್ತಿತ ರೈಲು ವಿಭಾಗ (32 ಕಿಮೀ) ಮತ್ತು ನಿರ್ಮಲಿ-ಅಸನ್‌ಪುರ ಹೊಸ ರೈಲು (6 ಕಿಮೀ) ಮಾರ್ಗವನ್ನು ಮೇ 7ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ರೈಲು ಸಂಖ್ಯೆ 05553 ಝಂಜರ್‌ಪುರ-ಸಹರ್ಸಾ ಡೆಮು ವಿಶೇಷ ರೈಲಿಗೆ ಫ್ಲ್ಯಾಗ್ ಆಫ್ ಮಾಡುವ ಮೂಲಕ ಹೊಸ ವಿಭಾಗದಲ್ಲಿ ರೈಲು ಸೇವೆಗಳಿಗೆ ಅವರು ಚಾಲನೆ ನೀಡಿದರು. ಈ ಮೂಲಕ ಬಿಹಾರದ ಮಿಥಿಲಾಂಚಲ ನಿವಾಸಿಗಳ 88 ವರ್ಷ ಹಳೆಯ ಬೇಡಿಕೆಯನ್ನು ನೆರವೇರಿಸಿಕೊಟ್ಟರು.

ಕೋಸಿ ನದಿಯ (ಮಿಥಿಲಾಂಚಲವನ್ನು ಎರಡು ಭಾಗಗಳಾಗಿ ವಿಂಗಡಿಸಿದ) ಸೇತುವೆಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ನಿವಾಸಿಗಳು ಬಹಳ ದೂರ ಪ್ರಯಾಣಿಸಬೇಕಾಗಿತ್ತು. ಈ ರೈಲು ಮಾರ್ಗ ಈ ಭಾಗದ ದೊಡ್ಡ ಸಮಸ್ಯೆಗೆ ಪರಿಹಾರ ಒದಗಿಸಿದೆ. ಝಂಜರ್‌ಪುರ ಮತ್ತು ಸಹರ್ಸಾ ನಡುವಿನ ಅಂತರವನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಬಿಹಾರದಲ್ಲಿ ರೈಲು ಮೂಲಸೌಕರ್ಯ ಮತ್ತು ಪ್ರಯಾಣಿಕರ ಸೌಲಭ್ಯಗಳ ಅಭಿವೃದ್ಧಿ ಕಾಮಗಾರಿಗೆ 6600 ಕೋಟಿ ರೂ.ಮೀಸಲಿಡಲಾಗಿದೆ.

ಈ ರೈಲು ಯೋಜನೆಯು 206 ಕಿಮೀ ಉದ್ದದ ಸಕ್ರಿ-ಲೌಹಾ ಬಜಾರ್ ನಿರ್ಮಲಿ ಮತ್ತು ಸಹರ್ಸಾ-ಫೋರ್ಬ್ಸ್‌ಗಂಜ್ ಗೇಜ್ ಪರಿವರ್ತನೆ ಯೋಜನೆಯಡಿಯಲ್ಲಿದೆ, ಇದರ ವೆಚ್ಚ ಸುಮಾರು 1584 ಕೋಟಿ ರೂ. 32 ಕಿ.ಮೀ ಉದ್ದದ ಝಂಜರ್‌ಪುರ-ನಿರ್ಮಲಿ ಗೇಜ್ ಪರಿವರ್ತನೆ ಮತ್ತು 6 ಕಿ.ಮೀ ಉದ್ದದ ನಿರ್ಮಲಿ-ಅಸನ್‌ಪುರ ಕುಪಹಾ ರೈಲು ಮಾರ್ಗ ನಿರ್ಮಾಣಕ್ಕೆ 456 ಕೋಟಿ ರೂ. ಇದರೊಂದಿಗೆ ಕೋಸಿ ಮೆಗಾಬ್ರಿಡ್ಜ್ ಅನ್ನು 491 ಕೋಟಿ ರೂಪಾಯಿ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...