alex Certify ಐಸಿಯು ನಲ್ಲಿ ನಡೆಯಿತು ಮದುವೆ; ಮಗಳಿಗೆ ಆಶೀರ್ವಾದ ಮಾಡಿ ತಾಯಿ ಕೊನೆಯುಸಿರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸಿಯು ನಲ್ಲಿ ನಡೆಯಿತು ಮದುವೆ; ಮಗಳಿಗೆ ಆಶೀರ್ವಾದ ಮಾಡಿ ತಾಯಿ ಕೊನೆಯುಸಿರು

ಪಟ್ನಾ: ಕೊನೆಯುಸಿರೆಳೆಯುತ್ತಿರುವ ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಿದ್ದಕ್ಕಾಗಿ ಬಿಹಾರದ ಯುವತಿಯೊಬ್ಬಳು ಜಾಲತಾಣದಲ್ಲಿ ಪ್ರಶಂಸೆ ಗಳಿಸುತ್ತಿದ್ದಾಳೆ. ತನ್ನ ಮಗಳು ತನ್ನ ಮುಂದೆ ಮದುವೆಯಾಗುವುದನ್ನು ನೋಡಬೇಕು ಎಂದು ತಾಯಿ ಬಯಸಿದ್ದರಿಂದ ಆಸ್ಪತ್ರೆಯ ಐಸಿಯು ಬಳಿಯೇ ಯುವತಿ ಮದುವೆಯಾಗಿದ್ದಾಳೆ.

ವಿವಾಹದ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅನಾರೋಗ್ಯದಿಂದ ಬಳಲುತ್ತಿರುವ ತಾಯಿ ಪೂನಂ ಕುಮಾರಿ ವರ್ಮಾ ಅವರು ವಧು-ವರರಿಗೆ ತಮ್ಮ ಆಶೀರ್ವಾದವನ್ನು ನೀಡಿದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ವೃದ್ಧೆ ತಾಯಿ ತೀರಿಕೊಂಡರು.

ಇದೇ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮನ್ ಕುಮಾರ್ ದುಬೆ ಎಂಬ ಇಂಟರ್ನೆಟ್ ಬಳಕೆದಾರರು ಮದುವೆಯ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಧುವಿನ ಹೆಸರು ಚಾಂದನಿ ಹಾಗೂ ವರನ ಹೆಸರು ಸುಮಿತ್‌ ಗೌರವ್‌ ಎನ್ನಲಾಗಿದೆ. ಯುವಕ ಕೂಡ ತನ್ನ ಭಾವಿ ಅತ್ತೆಯ ಆಸೆ ಪೂರೈಸಲು ಆಸ್ಪತ್ರೆಯಲ್ಲಿಯೇ ಮದುವೆಯಾಗಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರೂ ಪ್ರಶಂಸೆ ಗಳಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...