ಗಯಾ: ಬಿಹಾರದ ಗಯಾದಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತಂಪು ಪಾನೀಯದಲ್ಲಿ ವಿಷ ಬೆರೆಸಿಕೊಟ್ಟು ಗಂಡನನ್ನು ಕೊಲೆ ಮಾಡಿದ್ದಾಳೆ.
ಗಯಾ ಜಿಲ್ಲೆಯ ಬರಾಚಟ್ಟಿ ಪೊಲೀಸ್ ಠಾಣೆ ಪ್ರದೇಶದ ದರ್ಬಾರ್ ಗ್ರಾಮದ 25 ವರ್ಷದ ದೀಪಕ್ ಮೃತಪಟ್ಟ ವ್ಯಕ್ತಿ. ಮೂರು ವರ್ಷಗಳ ಹಿಂದೆ ಗಯಾ-ಪಾಟ್ನಾ ಮಾರ್ಗದ ಚಕಂದ್ ಬಳಿಯ ರಾನಾಪುರ ಗ್ರಾಮದ ನಿವಾಸಿ ರೇಷ್ಮಾ(22) ಮದುವೆಯಾಗಿದ್ದು, ದಂಪತಿಗೆ ಎರಡು ವರ್ಷದ ಮಗು ಇದೆ.
ಗೆಳೆಯನನ್ನು ಪ್ರೀತಿಸುತ್ತಿದ್ದ ರೇಷ್ಮಾ ಗಂಡನ ಕೊಲೆ ಮಾಡಲು ಮುಂದಾಗಿದ್ದು, ಶುಕ್ರವಾರ ರಾತ್ರಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕೊಟ್ಟು ದೀಪಕ್ ನನ್ನ ಕೊಲೆ ಮಾಡಲಾಗಿದೆ. ಆತನ ಮೃತದೇಹವನ್ನು ಗಯಾದ ಅನುಗ್ರಾ ನಾರಾಯಣ್ ಮಗಧ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.