
ಪಂಕಜ್ ರೈ ರಾತ್ರಿ ತನ್ನ ಮನೆಯಿಂದ ಹೊರ ಬಂದ ವೇಳೆ ಸಮೀಪದಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಕಾದು ಕುಳಿತಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಲು ಆರಂಭಿಸಿದ್ದಾರೆ. ಇದರಿಂದ ಗಾಬರಿಗೊಂಡು ಆತ ಮನೆಯೊಳಗೆ ಓಡಿಹೋಗಿದ್ದು, ಅಷ್ಟರಲ್ಲಾಗಲೇ ಸಾಕಷ್ಟು ಗುಂಡುಗಳು ಆತನ ದೇಹ ಹೊಕ್ಕಿತ್ತು. ಕುಟುಂಬಸ್ಥರು ಪಂಕಜ್ ರೈ ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ.
ಪಂಕಜ್ ರೈ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದು, ಗುಂಡೇಟಿನಿಂದ ಮೃತಪಟ್ಟಿರುವ ಪಂಕಜ್ ರೈ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡಿನ ದಾಳಿಯಲ್ಲಿ ಜನಪ್ರತಿನಿಧಿ ಮೃತಪಟ್ಟಿರುವ ಕಾರಣ ಸ್ಥಳೀಯರಲ್ಲಿ ಆತಂಕ ಮೂಡಿದೆ. ಇದರ ಮಧ್ಯೆ ಘಟನೆ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ , ಆಡಳಿತರೂಢ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಿಹಾರದಲ್ಲಿ ಗೂಂಡಾ ರಾಜ್ ಆರಂಭವಾಗಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.