ಪಾಟ್ನಾ: ಲೈಂಗಿಕ ದೌರ್ಜನ್ಯದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ ವಿಧವೆ ಮೇಲೆ ಇಬ್ಬರು ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆಕೆಯ ಅಪ್ರಾಪ್ತ ಮಗನ ಮುಂದೆಯೇ ಇಂತಹ ಕೃತ್ಯವೆಸಗಿದ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ವಿಧವೆ ಚಕ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯಲ್ಲಿ ವಾಸವಾಗಿದ್ದಾಳೆ. 13 ವರ್ಷದ ಕಿರಿಯ ಪುತ್ರನೊಂದಿಗೆ ವಾಸವಾಗಿದ್ದು, ಆಕೆಯ ಹಿರಿಯಮಗ 16 ವರ್ಷ ವಯಸ್ಸಿನ ಬಾಲಕ ಸೂರತ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಸೋಮವಾರ ಮಧ್ಯರಾತ್ರಿ ಗೆಳೆಯನೊಂದಿಗೆ ಮನೆಗೆ ಬಂದಿದ್ದ ಆಕೆಯ ಸಹೋದರಿಯ ಪತಿ ಸುಖದೇವ್ ಮತ್ತು ಸೋದರಮಾವ ಮಹೇಂದ್ರ ಯಾದವ್ ಇಂತಹ ಕೃತ್ಯ ಎಸಗಿದ್ದಾರೆ. ವಿಧವೆಯನ್ನು ಅಡ್ಡಗಟ್ಟಿ ಆಕೆಯ ಮಗನ ಮುಂದೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯ ಅಪ್ರಾಪ್ತ ಮಗ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡಿದ್ದಾಳೆ. ಈ ವೇಳೆ ತನ್ನ ಸಂಬಂಧಿಕರು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆಕೆ ತಿಳಿಸಿದ್ದು, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ವೈದ್ಯಕೀಯ ಪರೀಕ್ಷೆ ವರದಿಗೆ ಕಾಯಲಾಗುತ್ತಿದೆ.
ಭೂವಿವಾದದ ಕಾರಣಕ್ಕೆ ಇಂತಹ ದೂರು ನೀಡಿರುವ ಆರೋಪ ಕೂಡ ಕೇಳಿಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.