ಬಿಹಾರದ ಜಮುಯಿ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪ ಅನ್ವೇಷಿಸಲು ಅಲ್ಲಿನ ಸರ್ಕಾರವು ಅನುಮತಿ ನೀಡಲು ತೀರ್ಮಾನಿಸಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಜಮುಯಿ ಜಿಲ್ಲೆಯಲ್ಲಿ 37.6 ಟನ್ ಖನಿಜಯುಕ್ತ ಅದಿರು ಸೇರಿದಂತೆ ಸುಮಾರು 222.88 ಮಿಲಿಯನ್ ಟನ್ ಚಿನ್ನದ ಮೀಸಲು ಅಲ್ಲಿದೆ.
ಬಿಹಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಮುಯಿಯಲ್ಲಿನ ಚಿನ್ನದ ನಿಕ್ಷೇಪಗಳ ಅನ್ವೇಷಣೆಗಾಗಿ
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾವು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ, ಅನ್ವೇಷಣೆಯಲ್ಲಿ ತೊಡಗಿರುವ ಏಜೆನ್ಸಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.
BIG NEWS: ಅಂಧರಿಗೆ ನೆರವಾಗುವ ಸ್ಮಾರ್ಟ್ ವಾಚ್ ಅಭಿವೃದ್ಧಿಪಡಿಸಿದ ಐಐಟಿ
ಜಮುಯಿ ಕರ್ಮಾಟಿಯಾ, ಝಾಝಾ ಮತ್ತು ಸೋನೋ ಮುಂತಾದ ಪ್ರದೇಶಗಳಲ್ಲಿ ಚಿನ್ನ ಇರುವುದನ್ನು ಜಿಎಸ್ಐ ಸಂಶೋಧನೆ ವಿಶ್ಲೇಷಿಸಿದ ನಂತರ ಸಮಾಲೋಚನೆ ಪ್ರಕ್ರಿಯೆಯು ಪ್ರಾರಂಭವಾಯಿತು ಎಂದು ಬಿಹಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಗಣಿ ಆಯುಕ್ತ ಹರ್ಜೋತ್ ಕೌರ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಬಿಹಾರ ಸರ್ಕಾರವು ಒಂದು ತಿಂಗಳ ಅವಧಿಯಲ್ಲಿ ಪ್ರಾಥಮಿಕ ಹಂತದ ಅನ್ವೇಷಣೆಗಾಗಿ ಕೇಂದ್ರೀಯ ಸಂಸ್ಥೆ ಅಥವಾ ಏಜೆನ್ಸಿಗಳೊಂದಿಗೆ ಎಂಒಯುಗೆ ಸಹಿ ಹಾಕುವ ಸಾಧ್ಯತೆಯಿದೆ.
ಬಿಹಾರದಲ್ಲಿ 222.885 ಮಿಲಿಯನ್ ಟನ್ ಚಿನ್ನದ ಲೋಹವಿದೆ, ಇದು ದೇಶದ ಒಟ್ಟು ಚಿನ್ನದ ನಿಕ್ಷೇಪದ ಶೇಕಡಾ 44 ರಷ್ಟಿದೆ ಎಂದು ಕೇಂದ್ರ ಅಂದಾಜಿಸಿದೆ.