ಪಾಟ್ನಾ: ಒಬ್ಬ ವ್ಯಕ್ತಿಯಲ್ಲಿ ಎಷ್ಟು ಹಲ್ಲುಗಳಿರಬಹುದು..? ಸಾಮಾನ್ಯವಾಗಿ 32 ಹಲ್ಲುಗಳಿರುತ್ತವೆ. ಎಲ್ಲೋ ಅಪರೂಪದ ಪ್ರಕರಣದಲ್ಲಿ 35 ಇರಬಹುದೇನೋ..! ಆದರೆ ಇಲ್ಲೊಬ್ಬಾತನ ದವಡೆಯಲ್ಲಿ ಬರೋಬ್ಬರಿ 82 ಹಲ್ಲುಗಳಿದ್ದವು.
ಹೌದು, ಆಶ್ಚರ್ಯವೆನಿಸಿದರೂ ಇದು ಸತ್ಯ. ಅಪರೂಪದ ಗೆಡ್ಡೆಯಿಂದ ಬಳಲುತ್ತಿದ್ದ ಬಿಹಾರದ ಹದಿಹರೆಯದ ಯುವಕನ ದವಡೆಯಿಂದ 3 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ 82 ಹಲ್ಲುಗಳನ್ನು ಹೊರತೆಗೆಯಲಾಗಿದೆ.
ರುಚಿ ರುಚಿಯಾದ ʼವೆನಿಲ್ಲಾ ಕೇಕ್ʼ ಮಾಡುವ ವಿಧಾನ
17 ವರ್ಷದ ನಿತೀಶ್ ಕುಮಾರ್, ಕಳೆದ 5 ವರ್ಷಗಳಿಂದ ದವಡೆಯ ಗೆಡ್ಡೆಯಾದ ಒಡೊಂಟೊಮಾದಿಂದ ಬಳಲುತ್ತಿದ್ದರು. ಆರೋಗ್ಯ ಪರಿಸ್ಥಿತಿಯು ತೀರಾ ಹದಗೆಟ್ಟಿತ್ತು. ಪರಿಣಾಮ ಸರಾಸರಿ ವಯಸ್ಕನ ಹಲ್ಲುಗಳಿಗಿಂತ 50 ಹಲ್ಲುಗಳು ಹೆಚ್ಚು ಅಂದ್ರೆ ಒಟ್ಟು 82 ಹಲ್ಲುಗಳನ್ನು ಹೊಂದಿದ್ದರು. ಅದಾಗ್ಯೂ ನಿತೇಶ್ ವರ್ಷಗಳಿಂದ ಸರಿಯಾಗಿ ಚಿಕಿತ್ಸೆ ಪಡೆದಿರಲಿಲ್ಲ. ಕೊನೆಗೂ ಬಿಹಾರದ ಇಂದಿರಾಗಾಂಧಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹೆಚ್ಚುವರಿ ಹಲ್ಲುಗಳಿಂದಾಗಿ ನಿತೇಶ್ ನ ಮುಖ ವಿರೂಪಗೊಂಡಿತ್ತು. ಡವಡೆಯ ಕೆಳಗೆ ಹಲ್ಲುಗಳು ಉಂಡೆಯಂತಾಗಿರುವುದು ಸ್ಕ್ಯಾನಿಂಗ್ ನಲ್ಲಿ ಕಂಡು ಬಂತು. ಕೊನೆಗೂ ಡಾ. ಪ್ರಿಯಾಂಕರ್ ಸಿಂಗ್ ಹಾಗೂ ಡಾ.ಜಾವೇದ್ ಇಕ್ಬಾಲ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ರು.