ಪಾಟ್ನಾ: ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿಯೊಬ್ಬ ಚಾಕೊಲೇಟ್ ತಿಂದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಉದ್ವಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಪುರ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಸುಭಮ್ ಕುಮಾರ್ ಶಾ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದ್ದು, ಕಿರಾಣಿ ಅಂಗಡಿ ನಡೆಸುತ್ತಿರುವ ನೆರೆಹೊರೆಯವರು ವಿಷ ಬೆರೆಸಿದ ಚಾಕೊಲೇಟ್ ನಿಂದ ಮಗನನ್ನು ಕೊಂದಿದ್ದಾರೆ ಎಂದು ಆತನ ತಂದೆ ಸಂತೋಷ್ ಶಾ ಆರೋಪಿಸಿದ್ದಾರೆ.
ಸುಭಮ್ ಅವರು ಗುರುವಾರ ಸಂಜೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ದಿನಸಿ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರು ಚಾಕೊಲೇಟ್ ನೀಡಿದರು. ಅದನ್ನು ತಿಂದಾಗ ಆರೋಗ್ಯ ಹದಗೆಡತೊಡಗಿತು. ನಾವು ತಕ್ಷಣವೇ ಅರಾಹ್ ಸದರ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅರ್ರಾಹ್ ಆದರೆ ಮಗ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸಂತೋಷ್ ಶಾ ಹೇಳಿದ್ದಾರೆ.
ಘಟನೆಯ ನಂತರ ಪಟ್ಟಣದ ಪೊಲೀಸ್ ಠಾಣೆಯ ತಂಡ ಸದರ್ ಆಸ್ಪತ್ರೆಗೆ ಆಗಮಿಸಿ ಮರಣೋತ್ತರ ಪರೀಕ್ಷೆ ವರದಿ ಪಡೆದಿದೆ. ಸಾವಿಗೆ ವಿಷಕಾರಿ ಅಂಶವೇ ಕಾರಣ ಎಂದು ತಿಳಿದುಬಂದಿದೆ.
ಎಫ್‌ಐಆರ್ ದಾಖಲಿಸಿದ್ದೇವೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಅದನ್ನು ಉದ್ವಂತ್ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.