ಹೋಳಿ ಹಬ್ಬ ಎಂದರೆ ಸಾಕು, ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲ ಏಳು ಬಣ್ಣದ ರಂಗಿನಲ್ಲಿ ಮಿಂದೆದ್ದಿರುತ್ತಾರೆ. ಆದರೆ ಇದೇ ಹಬ್ಬ ಬಿಹಾರ್ ನ ಕುಟುಂಬವೊಂದಕ್ಕೆ ಕರಾಳ ಹಬ್ಬ ಅನ್ನುವ ಹಾಗೆ ಮಾಡಿದೆ.
ಬಿಹಾರ್‌ನ ಗಯಾದಲ್ಲಿ ಹೋಳಿ ಹಬ್ಬ ಆಡುತ್ತಿರೋ ಸಂದರ್ಭದಲ್ಲಿ ನಡೆದ ದುರಂತ ಇದು. ಬೆಳಿಗ್ಗೆ ಸುಮಾರು 8 ಗಂಟೆಯ ಸಮಯ. ಮನೆಯ ಮುಂದೆಯೇ ಕುಟುಂಬದವರೆಲ್ಲರೂ ಸೇರಿ ಹೋಳಿ ಆಡುತ್ತಿದ್ದಾಗ ಅವರ ಮೇಲೆ ಮಿಲಿಟರಿ ಶೆಲ್ ಒಂದು ಬಂದು ಬೀಳುತ್ತೆ. ಅದು ಏನು ಅಂತ ತಿಳಿದುಕೊಳ್ಳುವಷ್ಟರಲ್ಲೇ ಆ ಬಾಲ್ ಬ್ಲಾಸ್ಟ್ ಆಗಿರುತ್ತೆ. ಇದರ ಪರಿಣಾಮ ಮೂವರ ಸಾವು ಸ್ಥಳದಲ್ಲೇ ಆಗಿದ್ದು ಉಳಿದ ಐವರ ಸ್ಥಿತಿ ಚಿಂತಾಜನಕವಾಗಿದೆ.
ಬರಚಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬುವೈರ್ ಪಂಚಾಯತ್ನ ಗುಲಾರ್ ವೆಡ್ ಗ್ರಾಮದ ಬಳಿ, ಎಂದಿನಂತೆ ಸೇನಾ ಸಿಬ್ಬಂದಿಯವರು, ಗುಂಡಿನ ಅಭ್ಯಾಸದಲ್ಲಿ ತೊಡಗಿದ್ದರು. ಇದೇ ಗುಂಡು ಅಲ್ಲೇ ಪಕ್ಕದ ಪ್ರದೇಶದಲ್ಲಿರುವ ಮನೆಯ ಬಳಿ ಬಿದ್ದಿದೆ. ಅದೇ ಬಾಂಬ್ ಬ್ಲಾಸ್ಟ್ ಆಗಿ, ಅನೇಕರ ಸಾವಿಗೆ ಕಾರಣವಾಗಿದೆ.
ಈ ಘಟನೆಯಲ್ಲಿ ಇನ್ನೂ ಮೂವರ ಸ್ಥಿತಿ ಚಿಂತಾಜನವಾಗಿದ್ದು. ಅದರಲ್ಲಿ ಒಬ್ಬರು ಮಹಿಳೆಯಾಗಿದ್ದಾರೆ. ಸದ್ಯಕ್ಕೆ ಇವರನ್ನ ಸ್ಥಳೀಯ ಆಸ್ಪತ್ರೆ ಅನುಗ್ರಹ ನಾರಾಯಣ್ ಮಗಧ್ ನಲ್ಲಿ ದಾಖಲಿಸಲಾಗಿದೆ. ಸದ್ಯಕ್ಕೆ ಈ ಘಟನೆ ಕುರಿತು ಎಫ್ಐಆರ್ ದಾಖಲಿಸಲಾಗಿದ್ದು, ಇವರ ಬಗ್ಗೆ ತನಿಖೆ ಮಾಡಲಾಗುತ್ತಿದೆ.