ಪಾಟ್ನಾ: ರಾಷ್ಟ್ರೀಯ ಜನತಾ ದಳ(ಆರ್.ಜೆ.ಡಿ.) ನಾಯಕ ವಿಜೇಂದ್ರ ಯಾದವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಕಾರ್ಘರ್ನ ನಿಮ್ದಿಹರಾ ರಸ್ತೆ ಬಳಿ ಈ ಕೊಲೆ ನಡೆದಿದೆ
ಶನಿವಾರ ವಿಜೇಂದ್ರ ಯಾದವ್ ಅವರು ಕೃಷಿ ಕೆಲಸ ಮಾಡಿಸಲು ಹೋಗುತ್ತಿದ್ದಾಗ ಆರು ಮಂದಿ ಬೈಕ್ ನಲ್ಲಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಎರಡು ಗುಂಡುಗಳು ತಗುಲಿವೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ಇದೆ. ತಲೆ ಮತ್ತು ಕುತ್ತಿಗೆಗೆ ಗುಂಡು ತಗುಲಿದೆ, ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಾವುದೇ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.