ಪಾಟ್ನಾ: ಮತದಾನ ಮಾಡಿದ ನಂತರ ಮತದಾರರ ಖಾತೆಯಲ್ಲಿದ್ದ ಹಣ ಮಾಯವಾದ ಪ್ರಕರಣ ಬಿಹಾರದಲ್ಲಿ ನಡೆದಿದೆ.
ಬಿಹಾರದ ಪೂರ್ನಿಯಾ ಜಿಲ್ಲೆಯ ಚೋಪ್ರಾ ಪಂಚಾಯತಿ ವ್ಯಾಪ್ತಿಯಲ್ಲಿರುವ ರಿಹುವಾ ಗ್ರಾಮದಲ್ಲಿ ನವೆಂಬರ್ 29 ರಂದು ಪಂಚಾಯಿತಿ ಚುನಾವಣೆಗೆ ಮತದಾನ ನಡೆದಿತ್ತು. ಮತದಾನ ಮಾಡಿದ ನಂತರ ಕೆಲವು ಮತದಾರರ ಬ್ಯಾಂಕ್ ಖಾತೆಯಲ್ಲಿದ್ದ ಸಾವಿರಾರು ರೂಪಾಯಿ ಹಣ ಮಾಯವಾಗಿದೆ. ಮತ ಚಲಾವಣೆಗೆ ಫಿಂಗರ್ ಪ್ರಿಂಟ್ ಪಡೆಯಲಾಗಿದೆ. ಇದಾದ ಕೆಲ ಸಮಯದಲ್ಲಿಯೇ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಾಯವಾಗಿರುವುದು ಗೊತ್ತಾಗಿದೆ. 30ಕ್ಕೂ ಹೆಚ್ಚು ಮಹಿಳೆಯರು ದೂರು ನೀಡಿದ್ದಾರೆ.
ಪೂರ್ನಿಯಾ ಜಿಲ್ಲಾಧಿಕಾರಿಗೆ ಈ ಕುರಿತಾಗಿ ದೂರು ನೀಡಿರುವುದಾಗಿ ಚೋಪ್ರಾ ಪಂಚಾಯಿತಿ ಮುಖ್ಯಸ್ಥ ಜಾವಿದ್ ಇಕ್ವಾಲ್ ಮಾಹಿತಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.