ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂವರು ಪುರುಷರು ಗರ್ಭಿಣಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, 21 ವರ್ಷದ ಮಹಿಳೆ ಆರು ತಿಂಗಳ ಗರ್ಭಿಣಿಯಾಗಿದ್ದು ಶನಿವಾರ ರಾತ್ರಿ ಊಟ ಮಾಡಿದ ನಂತರ ವಾಕ್ ಮಾಡಲು ಹೊರಟಿದ್ದಾಗ ಅಪಹರಿಸಲಾಗಿದೆ. ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಏತನ್ಮಧ್ಯೆ ಆಕೆಯ ಕುಟುಂಬ ಸದಸ್ಯರು ಅವಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಾಟ್ನಾ ರೈಲ್ವೇ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಮಹಿಳೆ ಅಳುತ್ತಿರುವುದನ್ನು ಕೆಲವು ಪ್ರಯಾಣಿಕರು ಗಮನಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮೂವರು ಆರೋಪಿಗಳಲ್ಲಿ ಇಬ್ಬರ ಬಂಧನವನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧಿತರನ್ನು ಅಂಕಿತ್ ಕುಮಾರ್(19) ಮತ್ತು ವಿಶಾಲ್ ಕುಮಾರ್(21) ಎಂದು ಗುರುತಿಸಲಾಗಿದೆ. ಮೂರನೇ ಆರೋಪಿ ಶ್ಯಾಮ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.
ಘಟನೆಯ ನಂತರ, ಲಖಿಸರೈಗೆ ತನ್ನ ಜೊತೆಗೆ ರೈಲಲ್ಲಿ ಬರುವಂತೆ ಆರೋಪಿ ಒತ್ತಾಯಿಸಿದ್ದನೆನ್ನಲಾಗಿದೆ. ಇಬ್ಬರೂ ಮಹಿಳೆಯಳನ್ನು ರೈಲು ನಿಲ್ದಾಣಕ್ಕೆ ಕರೆದೊಯ್ದರು. ಆರೋಪಿಗಳಲ್ಲಿ ಒಬ್ಬ ಟಿಕೆಟ್ ಖರೀದಿಸಲು ಹೋಗಿದ್ದ ಎಂದು ಮಹಿಳಾ ಪೊಲೀಸ್ ಠಾಣೆ ಎಸ್ಹೆಚ್ಒ ಕಿಶೋರ್ ಶಾಚಾರಿ ಹೇಳಿದ್ದಾರೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗುತ್ತದೆ. ಆಕೆ ಮತ್ತು ಆರೋಪಿಗಳು ಅದೇ ಪ್ರದೇಶದ ನಿವಾಸಿಗಳಾಗಿದ್ದು, ಮತ್ತೊಬ್ಬ ಆರೋಪಿ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ.