ಪಾಟ್ನಾ: ಬಿಹಾರದಲ್ಲಿ ಬಿಜೆಪಿ -ಜೆಡಿಯು ಮೈತ್ರಿ ಮುರಿದು ಬಿದ್ದಿದ್ದು ‘ಮಹಾಘಟಬಂಧನ್ -2’ ಸರ್ಕಾರ ರಚನೆಯಾಗಲಿದೆ.
ಬಿಜೆಪಿಗೆ ಶಾಕ್ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿದ್ದಾರೆ. ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ರಚನೆ ಹಕ್ಕು ಮಂಡಿಸಿರುವ ನಿತೀಶ್ ಕುಮಾರ್ ಇಂದು 8ನೇ ಬಾರಿಗೆ ಮುಖ್ಯಮಂತ್ರಿಗಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಬೇಸರಗೊಂಡಿದ್ದರು. ಆರು ತಿಂಗಳಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಇದೇ ವೇಳೆ ಅವರು ಆರ್.ಜೆ.ಡಿ. ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಉತ್ತಮ ನಂಟು ಹೊಂದಿರುವುದು ಮತ್ತೆ ಮಹಾಘಟಬಂಧನ್ ಮೈತ್ರಿಗೆ ಅನುಕೂಲವಾಗಿದೆ.
ಇಂದು ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಿಹಾರದಲ್ಲಿ ‘ಮಹಾಘಟಬಂಧನ್ 2’ ಸರ್ಕಾರ ರಚನೆಯಾಗಲಿದೆ.