
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೋಪಗೊಂಡಿರುವ ಜೀವೇಶ್ ಮಿಶ್ರಾ ಕರ್ತವ್ಯನಿರತ ಪೊಲೀಸರನ್ನು ಅಮಾನತುಗೊಳಿಸುವಂತೆ ಬೆದರಿಕೆಯೊಡ್ಡಿದ್ದನ್ನು ಕೇಳಬಹುದಾಗಿದೆ. ನಾನು ಸರ್ಕಾರದ ಭಾಗವಾಗಿದ್ದೇನೆ. ನೀವು ನನ್ನೊಡನೆ ದುರ್ವರ್ತನೆ ತೋರುತ್ತಿದ್ದೀರಿ ಎಂದು ಜೀವೇಶ್ ಮಿಶ್ರಾ ಆವಾಜ್ ಹಾಕಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದಾರಿ ಮಾಡಿಕೊಡುವ ಸಲುವಾಗಿ ಸಚಿವರನ್ನು ರಸ್ತೆ ಮೇಲೆ ಕಾಯುವಂತೆ ಮಾಡಿದ್ದಾರೆ. ಈ ಪೊಲೀಸರು ಅಮಾನತು ಆಗುವವರೆಗೂ ನಾನು ವಿಧಾನಸಭೆಗೆ ಕಾಲಿಡೋದಿಲ್ಲ ಎಂದು ಜೀವೇಶ್ ಮಿಶ್ರಾ ಆವಾಜ್ ಹಾಕಿದ್ದಾರೆ.