
ಪಾಟ್ನಾ: ಬಿಜೆಪಿ ಬಿಹಾರ ರಾಜ್ಯ ಅಧ್ಯಕ್ಷ ಡಾ. ದಿಲೀಪ್ ಜೈಸ್ವಾಲ್ ಅವರು ಬಿಹಾರ ಸರ್ಕಾರದಲ್ಲಿನ ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬಿಹಾರ ಸಚಿವರ ರಾಜೀನಾಮೆ ಪತ್ರದಲ್ಲಿನ ಕಾಗುಣಿತ ದೋಷಗಳಿಗಾಗಿ ಟ್ರೋಲ್ ಮಾಡಲಾಗಿದೆ.
ಅವರು ಫೆಬ್ರವರಿ 26 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಅವರ ಲೆಟರ್‌ಹೆಡ್‌ನಲ್ಲಿ ಬರೆಯಲಾದ ರಾಜೀನಾಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗಮನ ಸೆಳೆದಿರುವುದು ರಾಜೀನಾಮೆ ಅಲ್ಲ, ಬದಲಾಗಿ ಅವರ ಪತ್ರದಲ್ಲಿನ ಸ್ಪಷ್ಟ ವ್ಯಾಕರಣ ದೋಷಗಳು ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿವೆ.
ಡಾ. ಜೈಸ್ವಾಲ್ ಅವರ ರಾಜೀನಾಮೆ ಪತ್ರದಲ್ಲಿ ಬಹು ಕಾಗುಣಿತ ತಪ್ಪುಗಳಿದ್ದು, ಅವರು ಮುಖ್ಯಮಂತ್ರಿಯನ್ನು ತಪ್ಪಾದ ಪದಗುಚ್ಛ ಮತ್ತು ತಪ್ಪು ಕಾಗುಣಿತಗಳೊಂದಿಗೆ ಸಂಬೋಧಿಸಿದ್ದಾರೆ. ‘ಬಿಹಾರ’ ಎಂದು ಬರೆಯುವ ಬದಲು, ಅವರು ‘ವಿಹಾರ್’ ಎಂದು ಬರೆದಿದ್ದಾರೆ. ‘ಸೂಚಿತ್'(ಮಾಹಿತಿ) ಎಂಬ ಪದವನ್ನು ‘ಸುಚಿತ್’ ಎಂದು ತಪ್ಪಾಗಿ ಬರೆಯಲಾಗಿದೆ. ಅವರು ‘ಇಸ್ತಿಫಾ’ (ರಾಜೀನಾಮೆ) ಮತ್ತು ‘ಕಾರವಾಯಿ’ (ಕ್ರಮ) ಎಂದೂ ತಪ್ಪಾಗಿ ಬರೆದಿದ್ದಾರೆ.
ಪತ್ರವು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ದೋಷಗಳನ್ನು ತೋರಿಸಿ ಟೀಕಿಸಿದ್ದಾರೆ. ಪ್ರಮುಖ ಇಲಾಖೆಗೆ ಜವಾಬ್ದಾರರಾಗಿರುವ ಅವರು ಉತ್ತಮ ರಾಜೀನಾಮೆ ಪತ್ರವನ್ನು ಬರೆಯಲು ಸಾಧ್ಯವಾಗದಿರುವುದು ವಿಪರ್ಯಾಸವೆಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಅವರ ಶೈಕ್ಷಣಿಕ ಅರ್ಹತೆಗಳನ್ನು ಅಪಹಾಸ್ಯ ಮಾಡಿ ಅವರ ಪಿಹೆಚ್‌ಡಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಆದಾಗ್ಯೂ, ಡಾ. ಜೈಸ್ವಾಲ್ ಅವರ ರಾಜೀನಾಮೆ ಪತ್ರದ ಸುತ್ತಲಿನ ವಿವಾದಕ್ಕೆ ಪ್ರತಿಕ್ರಿಯಿಸಿಲ್ಲ.