alex Certify ಮೊದಲ ಮದುವೆ ಮುಚ್ಚಿಟ್ಟು ಮತ್ತೊಬ್ಬರಿಗೆ ತಾಳಿ ಕಟ್ಟಲು ಯತ್ನ…! ಕಾನೂನು ಏನು ಹೇಳುತ್ತದೆ ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಮದುವೆ ಮುಚ್ಚಿಟ್ಟು ಮತ್ತೊಬ್ಬರಿಗೆ ತಾಳಿ ಕಟ್ಟಲು ಯತ್ನ…! ಕಾನೂನು ಏನು ಹೇಳುತ್ತದೆ ತಿಳಿಯಿರಿ

ಈಗಾಗಲೇ ವಿವಾಹವಾಗಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಹೊಂದಾಣಿಗೆ ಬಾರದ ಕಾರಣಕ್ಕೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅದು ಮಂಜೂರಾಗುವ ಮುನ್ನವೇ ಈ ವಿಷಯವನ್ನು ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು ಹೋಗಿ ಈಗ ಫಜೀತಿಗೆ ಸಿಲುಕಿದ್ದಾನೆ.

ಬಿಹಾರದ ಭಾಗಲ್ಪುರ ನಿವಾಸಿ ಮನೋಜ್ ಪಂಡಿತ್ ವಿವಾಹಿತನಾಗಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದ ವೇಳೆ ಇದರ ಮಾಹಿತಿ ತಿಳಿದ ಅವರ ಮೊದಲ ಪತ್ನಿ ಎಂಟ್ರಿ ಕೊಟ್ಟಿದ್ದು, ಇದು ಅಂತಿಮವಾಗಿ ಮದುವೆಯನ್ನು ರದ್ದುಗೊಳಿಸಲು ಕಾರಣವಾಯಿತು ಎಂದು ವರದಿಯಾಗಿದೆ.

ಮನೋಜ್ ಪಂಡಿತ್, ಜಾರ್ಖಂಡ್ ಮೂಲದ ಸೇಖಾ ದೇವಿ ಅವರೊಂದಿಗೆ ಪ್ರೇಮ ವಿವಾಹವಾಗಿದ್ದರು. ಆದಾಗ್ಯೂ, ದಂಪತಿಗಳ ನಡುವೆ ವಿವಾದ ಹುಟ್ಟಿಕೊಂಡಿದ್ದು, ರಾಜಿ ಸಂಧಾನ ವಿಫಲವಾದಾಗ, ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಗಿದೆ. ಸೇಖಾ ಮತ್ತು ಮನೋಜ್ ನಡುವಿನ ವಿಚ್ಛೇದನ ಇನ್ನೂ ಬಾಕಿ ಇರುವಾಗಲೇ, ಮನೋಜ್ ತಂದೆ ಬಸುಕಿ ಪಂಡಿತ್ ಮತ್ತು ಇತರ ಕುಟುಂಬ ಸದಸ್ಯರು ಆತನಿಗೆ ಎರಡನೇ ಮದುವೆ ಮಾಡಲು ಮುಂದಾಗಿದ್ದಾರೆ.

ತನ್ನ ಪತಿಯ ಎರಡನೇ ಮದುವೆಯ ಯೋಜನೆ ಬಗ್ಗೆ ತಿಳಿದ ನಂತರ, ಸೇಖಾ ದೇವಿ ತನ್ನ ತಾಯಿಯೊಂದಿಗೆ ವಧು-ವರರ ಮನೆಗೆ ಹೋಗಿದ್ದು, ಮನೋಜ್ ಮನೆಯವರು ಎರಡನೇ ಮದುವೆಯ ಯೋಜನೆಯನ್ನು ರಹಸ್ಯವಾಗಿಟ್ಟಿದ್ದರು.

ಡಿಸೆಂಬರ್ 10ರಂದು ಮದುವೆ ನಿಶ್ಚಯವಾಗಿದ್ದು, ಮೆರವಣಿಗೆಯನ್ನು ಸ್ವಾಗತಿಸಲು ವಧುವಿನ ಮನೆಯವರು ಸಕಲ ವ್ಯವಸ್ಥೆ ಮಾಡಿದ್ದರು. ಹಲ್ದಿ ಮತ್ತು ಮೆಹಂದಿ ಸಮಾರಂಭಗಳು ಸೇರಿದಂತೆ ಮದುವೆಯ ಪೂರ್ವ ಆಚರಣೆಗಳು ನಡೆಯುತ್ತಿದ್ದ ವೇಳೆ ಸೇಖಾ ದೇವಿಯು ವಧುವಿನ ಮನೆಗೆ ನುಗ್ಗಿ ಹಿಂದಿನ ಮದುವೆಯ ವಿವರವನ್ನು ಬಹಿರಂಗಪಡಿಸಿದ್ದಾರೆ.

ಮನೋಜ್ ಪಂಡಿತ್ ಈಗಾಗಲೇ ಮದುವೆಯಾಗಿರುವುದು ಎರಡನೇ ವಧುವಿನ ಮನೆಯವರಿಗೆ ತಿಳಿದಿರಲಿಲ್ಲ ಎನ್ನಲಾಗಿದ್ದು, ಸುದ್ದಿ ತಿಳಿದು ಆಘಾತಕ್ಕೊಳಗಾದ ಮನೆಯವರು ಮದುವೆಯನ್ನು ತಕ್ಷಣವೇ ರದ್ದುಗೊಳಿಸಿದ್ದಾರೆ.

ಭಾರತೀಯ ಕಾನೂನು ಏನು ಹೇಳುತ್ತದೆ ?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 494 ರ ಅಡಿಯಲ್ಲಿ, ವಿವಾಹಿತ ವ್ಯಕ್ತಿಯು ಹಿಂದಿನ ವಿವಾಹದಿಂದ ವಿಚ್ಛೇದನವನ್ನು ಪಡೆಯದೆ ಮತ್ತೆ ಮದುವೆಯಾದರೆ, ಎರಡನೇ ಮದುವೆಯನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ. ಈ ಅಪರಾಧ ಸಾಬೀತಾದರೆ, ವ್ಯಕ್ತಿಯು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...