alex Certify ಅತ್ಯಾಚಾರವೆಸಗಿದ ವ್ಯಕ್ತಿಯ ಜನನಾಂಗ ಕತ್ತರಿಸಿದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರವೆಸಗಿದ ವ್ಯಕ್ತಿಯ ಜನನಾಂಗ ಕತ್ತರಿಸಿದ ಮಹಿಳೆ….!

ಅತ್ಯಾಚಾರವೆಸಗಿದ ವ್ಯಕ್ತಿಯ ಜನನಾಂಗವನ್ನ ಭಾಗಶಃ ಮಹಿಳೆ ಸೀಳಿ ಹಾಕಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ತನ್ನ ಮನೆಗೆ ನುಗ್ಗಿ ತನ್ನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ಜನನಾಂಗವನ್ನು ಆತ್ಮರಕ್ಷಣೆ ವೇಳೆ ಮಹಿಳೆ ಭಾಗಶಃ ಸೀಳಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

20 ರ ಹರೆಯದ ಮಹಿಳೆ ತನ್ನ ಮನೆಯಲ್ಲಿ ಮಲಗಿದ್ದಾಗ ಆಕೆಯ ಪತಿ ಇಲ್ಲದ ವೇಳೆ 27 ವರ್ಷದ ಆರೋಪಿಯು ಛಾವಣಿಯಿಂದ ಆಕೆಯ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ.

ವರದಿಯ ಪ್ರಕಾರ ಮಹಿಳೆ ಮೊದಲು ಅತ್ಯಾಚಾರದ ಪ್ರಯತ್ನವನ್ನು ವಿರೋಧಿಸಲು ಪ್ರಯತ್ನಿಸಿದರು. ಆದರೆ ಅವನನ್ನು ತಡೆಯಲು ಸಾಧ್ಯವಾಗದಿದ್ದಾಗ ಹತ್ತಿರದಲ್ಲಿದ್ದ ಶೇವಿಂಗ್ ಬ್ಲೇಡ್ ಅನ್ನು ಎತ್ತಿಕೊಂಡು ಅವನ ಜನನಾಂಗಗಳನ್ನು ಭಾಗಶಃ ಸೀಳಿದರು.

ನಂತರ ಮಹಿಳೆ ದಾಳಿಕೋರನ ಹಿಡಿತದಿಂದ ತನ್ನನ್ನು ತಾನು ಬಿಡಿಸಿಕೊಂಡರು. ಗ್ರಾಮಸ್ಥರು ಆಕೆಯ ರಕ್ಷಣೆಗೆ ಬರುವಷ್ಟರಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.

ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...